ಉಡುಪಿ ಜಿಲ್ಲೆಯನ್ನು ಕುರುಡು ಮುಕ್ತ ಜಿಲ್ಲೆಯನ್ನಾಗಿಸಲು ಪ್ರಯತ್ನ : ಡಾ. ಕೃಷ್ಣಪ್ರಸಾದ್
Thumbnail
ಉಡುಪಿ : ಉಚಿತ ನೇತ್ರ ತಷಾಸಣಾ ಶಿಬಿರಗಳ ಮೂಲಕ ಉಡುಪಿ ಜೆಲ್ಲೆಯನ್ನು ಕುರುಡುಮುಕ್ತ ಜೆಲ್ಲೆಯನ್ನಾಗಿಸಲು ಪ್ರಯತ್ನಿಸುತ್ತಿರುವುದಾಗಿ ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ನಾಡೋಜ ಗೌರವ ಪಡೆದ ಡಾ ಕೃಷ್ಣ ಪ್ರಸಾದ್ ತಿಳಿಸಿದರು. ಅವರು ಬಂಟಕಲ್ಲು ಜಿಝೊ ಎಜುಕೇಶನ್ ಸಭಾಂಗಣದಲ್ಲಿ ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಲಯನ್ಸ್ ಕ್ಲಬ್ ಬಂಟಕಲ್ಲು - ಬಿ.ಸಿ ರೋಡು, ರಾಜಾಪುರ ಸಾರಸ್ವತ ಯುವ ವೃಂದ ಬಂಟಕಲ್ಲು , ಶ್ರೀ ಗುರುರಾಘವೇಂದ್ರ ಸಮಾಜಸೇವಾ ಮಂಡಳಿ (ರಿ.) ಹೇರೂರು, ಕಥೋಲಿಕ್ ಸ್ತ್ರೀ ಸಂಘಟನೆ ಪಾಂಬೂರು ಘಟಕ, ಉಡುಪಿ ಜಿಲ್ಲಾ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಬಂಟಕಲ್ಲು ಘಟಕ, ಸ್ವಾಸ್ಥ್ಯ ಆಯೋಗ ಪಾಂಬೂರು ಚರ್ಚ್ ಇವರ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ತಪಾಸಣೆ ಶಿಬಿರ, ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರದ ಆಯುಷ್ಮಾನ್ ಯೋಜನೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿ, ಎಲ್ಲರೂ ಕರೋನಾ ಲಸಿಕೆಯನ್ನು ಪಡೆಯುವಂತೆ ತಿಳಿಸಿದರು. ಅಭಿನಂದನೆ : ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವ ಪಡೆದ ಡಾ. ಕೃಷ್ಣಪ್ರಸಾದ್ ರವರನ್ನು ನಾಗರಿಕ ಸಮಿತಿ ಪರವಾಗಿ ಕೆ.ಆರ್ ಪಾಟ್ಕರ್ ರವರು ಶಾಲು ಹೊದಿಸಿ ಅಭಿನಂದಿಸಿದರು. ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅಧ್ಯಕ್ಷ , ಶಿರ್ವ ಗ್ರಾ.ಪಂ ಸದಸ್ಯ ಕೆ. ಆರ್. ಪಾಟ್ಕರ್ ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲ. ವಿಜಯ್ ಧೀರಾಜ್, ರಾಜಾಪುರ ಸಾರಸ್ವತ ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಹೇರೂರು ಶ್ರೀ ಗುರುರಾಘವೇಂದ್ರ ಸಮಾಜಸೇವಾ ಮಂಡಳಿ ಅಧ್ಯಕ್ಷ ಶ್ರೀನಿವಾಸ ದೇವಾಡಿಗ, ಉಡುಪಿ ಜಿಲ್ಲಾ ಟ್ಯಾಕ್ಸಿ ಮತ್ತು ಕ್ಯಾಬ್ ಎಸೋಷಿಯೇಶನ್ ಬಂಟಕಲ್ಲು ಘಟಕದ ಅಧ್ಯಕ್ಷ ಉಮೇಶ್ ರಾವ್, ಪಾಂಬೂರ್ ಕಥೋಲಿಕ್ ಸ್ತ್ರಿ ಸಂಘಟನೆ ಅಧ್ಯಕ್ಷೆ ಶ್ರೀಮತಿ ಜೂಲಿಯೆಟ್ ರೀಟಾ ಮೋನಿಸ್, ಪಾಂಬೂರ್ ಸ್ವಾಸ್ಥ್ಯ ಆಯೋಗದ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ಸಲ್ಡಾನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಗರಿಕ ಸಮಿತಿ ಕೋಶಾಧಿಕಾರಿ ಜಗದೀಶ ಆಚಾರ್ಯ, ಗ್ರಾ ಪಂ ಸದಸ್ಯೆ ವೈಲೆಟ್ ಕಸ್ತಲಿನೊ, ಯುವ ವೃಂದದ ಕಾರ್ಯದರ್ಶಿ ಆಶಿಷ್ ಪಾಟ್ಕರ್, ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಪ್ರಭು, ಪ್ರಸಾದ್ ನೇತ್ರಾಲಯದ ಪಿ.ಆರ್ ಓ ಶ್ರೀ ಹರ್ಷ, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂಧಿ ವರ್ಗ, ಉಪಸ್ಥಿತರಿದ್ದರು. ಸುಮಾರು 125 ನಾಗರಿಕರು ಶಿಬಿರದ ಪ್ರಯೋಜನ ಪಡೆದರು. ರೋಹಿಣಿ ನಾಯಕ್ ಪ್ರಾರ್ಥಿಸಿ, ನಾಗರಿಕ ಸೇವಾ ಸಮಿತಿ ಕಾರ್ಯದರ್ಶಿ ದಿನೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ವಿರೇಂದ್ರ ಪಾಟ್ಕರ್ ಧನ್ಯವಾದವಿತ್ತರು.
Additional image Additional image Additional image
12 Apr 2021, 11:55 AM
Category: Kaup
Tags: