ಕಟಪಾಡಿ : ನಾಪತ್ತೆಯಾದ ಯುವಕನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
ಕಾಪು : ಕಟಪಾಡಿ ಸರ್ವಿಸ್ ರಸ್ತೆಯ ನಾಗಬನದ ಹತ್ತಿರ ಮರಕ್ಕೆ ಬೆಲ್ಟಿನಿಂದ ನೇಣು ಹಾಕಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ. ಮೃತ ದೇಹವು ಕೊಳೆತ ಸ್ಥಿತಿಯಲ್ಲಿದ್ದು ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕಾಪು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯನ್ನು ಸಂದೀಪ್ ದೇವಾಡಿಗ ಕಟಪಾಡಿ ಮಟ್ಟು ನಿವಾಸಿ ಎಂದು ತಿಳಿದು ಬಂದಿದ್ದು, ಈ ಯುವಕನ ಬಗ್ಗೆ ಏಪ್ರಿಲ್ 7ರಂದು ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿರುತ್ತದೆ. ಘಟನೆಯ ಬಗ್ಗೆ ಮುಂದಿನ ತನಿಖೆಯಿಂದ ನಿಖರ ಮಾಹಿತಿ ತಿಳಿದು ಬರಬೇಕಾಗಿದೆ.
ಘಟನಾ ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಪು ಎಸ್ಐ ರಾಘವೇಂದ್ರ, ಆಸ್ಟಿನ್ ಹಾಗೂ ಆಪತ್ಬಾಂಧವ ಸೂರಿ ಶೆಟ್ಟಿ ಕಾಪು ಅವರು ಮೃತದೇಹವನ್ನು ಇಳಿಸಲು ಸಹಕರಿಸಿದರು.
