ಇನ್ನಂಜೆ : ಶ್ರೀ ದೇವಿ ಭಜನಾ ಮಂಡಳಿಯ 43ನೇ ಭಜನಾ ಮಂಗಳೋತ್ಸವ
Thumbnail
ಕಾಪು : ಇನ್ನಂಜೆ ಗ್ರಾಮದ ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯ 43ನೇ ಭಜನಾ ಮಂಗಳೋತ್ಸವವನ್ನು ಗ್ರಾಮದ ಹಿರಿಯರು, ಧಾರ್ಮಿಕ ಚಿಂತಕರು, ಸಮಾಜಸೇವಕರಾದ ಸದಾನಂದ ಕೆ. ಶೆಟ್ಟಿ ದೀಪ ಪ್ರಜ್ವಲಿಸಿ ಭಜನಾಮಂಗಲೋತ್ಸವಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆಯು ಮಂಡಳಿಯ ಸ್ಥಾಪಕ ಅಧ್ಯಕ್ಷರಾದ ಜಯಕರ ಶೆಟ್ಟಿ ದಂಪತಿಗಳ ಉಪಸ್ಥಿತಿಯಲ್ಲಿ ನೆರವೇರಿತು. ಈ ಸಂದರ್ಭ ಗ್ರಾಮದ ಹಿರಿಯರು ಹಾಗೂ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
28 Apr 2021, 10:08 AM
Category: Kaup
Tags: