ಸೂರ್ಯನಮಸ್ಕಾರದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಉಡುಪಿಯ ರೇಣುಕಾ ಗೋಪಾಲಕೃಷ್ಣ
Thumbnail
ಕಾಪು : ಸತತ ಪರಿಶ್ರಮದ ಮೂಲಕ ಯೋಗದಲ್ಲಿ ಸಾಧನೆಯನ್ನು ಮಾಡಿ ಇದೀಗ 17 ನಿಮಿಷ, 49 ಸೆಕೆಂಡ್ ಗಳಲ್ಲಿ 170 ಸೂರ್ಯನಮಸ್ಕಾರ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ ಉಡುಪಿ ಸಮೀಪದ ಪೆರಂಪಳ್ಳಿ ಬೊಬ್ಬರ್ಯಕಟ್ಟೆ ರೇಣುಕಾ ಗೋಪಾಲಕೃಷ್ಣ. ಈ ಮೂಲಕ ಅಸ್ಸಾಮಿನ ಪುಷ್ಪಾಂಜಲಿ ಸೇನಾಪತಿ ಅವರ 1 ಗಂಟೆ 15 ನಿಮಿಷ 48 ಸೆಕೆಂಡ್ ಗಳಲ್ಲಿ 132 ಸೂರ್ಯನಮಸ್ಕಾರದ ದಾಖಲೆಯನ್ನು ರೇಣುಕಾ ಗೋಪಾಲಕೃಷ್ಣ ಮುರಿದಿದ್ದಾರೆ. ಈ ಸಂದರ್ಭ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ಸತೀಶ್, ಇಂಡಿಯ ಬುಕ್ ಆಫ್ ರೆಕಾರ್ಡ್ಸ್‌ನ ಹರೀಶ್ ಆರ್., ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ., ಮಲ್ಪೆ ಸಿಎಸ್ಪಿ ಶಾಖಾಧೀಕ್ಷಕ ಗೋಪಾಲಕೃಷ್ಣ, ಮಲ್ಪೆ ಸಿಎಸ್ಪಿ ನಿವೃತ್ತ ಪಿಎಸ್ಐ ಬಿ. ಮನಮೋಹನ ರಾವ್ ಉಪಸ್ಥಿತರಿದ್ದರು.
Additional image Additional image
29 Apr 2021, 12:57 PM
Category: Kaup
Tags: