ಬಂಟಕಲ್ಲು: ಕೋವಿಡ್ ಲಸಿಕೆ ಪೂರ್ವ ರಕ್ತದಾನ ಶಿಬಿರ
ಕಾಪು : ಸ್ಥಳೀಯ ರಾಜಾಪುರ ಸಾರಸ್ವತ ಯುವ ವೃಂದದ ಸದಸ್ಯರು ಕೋವಿಡ್ ಲಸಿಕೆ ಪಡೆಯುವ ಮುಂಚಿತವಾಗಿ ರಕ್ತದಾನ ಮಾಡುವ ಉಪಯುಕ್ತ ಕಾರ್ಯಕ್ರಮವು ಇಂದು ಜರುಗಿತು. 60 ಕ್ಕೂ ಹೆಚ್ಚು ಭಾರಿ ರಕ್ತ ದಾನ ಮಾಡಿದ ರಕ್ತದಾನಿ ಶ್ರೀ ದೇವದಾಸ್ ಪಾಟ್ಕರ್ ಲವರ ನೇತೃತ್ವದಲ್ಲಿ ಇಂದು ಮಣಿಪಾಲ ಕೆ ಎಮ್ ಸಿ ಯ ಬ್ಲಡ್ ಬ್ಯಾಂಕ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಿರ್ವ ಗ್ರಾ.ಪಂ ಅಧ್ಯಕ್ಷ , ರಾ ಸಾ ಯುವ ವೃಂದದ ಗೌರವಾಧ್ಯಕ್ಷರೂ ಆಗಿರುವ ಕೆ. ಆರ್. ಪಾಟ್ಕರ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು. ಕೊರೋನಾ ಸಂಕಷ್ಟ ಸಮಯದಲ್ಲಿ ಯುವ ವೃಂದದ ಸದಸ್ಯರು ಲಸಿಕೆ ಪಡೆಯುವ ಮುಂಚಿತವಾಗಿ ಸ್ವಯಂ ಪ್ರೇರಿತರಾಗಿ ರಕ್ತ ದಾನ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.
ರಕ್ತದ ಕೊರತೆಯಾಗುವಂತಹ ಈ ಸಂಧರ್ಭದಲ್ಲಿ ಇದರ ನೇತೃತ್ವ ವಹಿಸಿ ಕಾರ್ಯಕ್ರಮ ಆಯೋಜಿಸಿದ ರಕ್ತದಾನಿ ದೇವದಾಸ ಪಾಟ್ಕರ್ ಇವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಕಾರ್ಯಕ್ರಮಕ್ಕೆ ಅಭಯ ಹಸ್ತ ಹೆಲ್ಪ್ ಲೈನ್ ಉಡುಪಿ, ರಕ್ತ ನಿಧಿ ಮಣಿಪಾಲ ಇವರು ಸಹಯೋಗ ನೀಡಿದ್ದು ಅಭಯ ಹೆಲ್ಪ್ ಲೈನ್ ನ ಸತೀಶ್ ಸಾಲಿಯಾನ್, ರಕ್ತ ನಿಧಿಯ ಡಾ| ದಿವ್ಯ , ಯುವ ವೃಂದದ ಅಧ್ಯಕ್ಷ ವಿಶ್ವನಾಥ ಬಾಂದೇಲ್ಕರ್, ಡಾ| ಶ್ರೀರಾಮ್ ಮರಾಠೆ ಹಾಗೂ ಯುವ ವೃಂದದ ಸದಸ್ಯರು ಉಪಸ್ಥಿತರಿದ್ದರು. 25 ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ವೃಂದದ ಪೂರ್ವಧ್ಯಕ್ಷ ವಿರೇಂದ್ರ ಪಾಟ್ಕರ್ ಹಾಗೂ ಸುಬ್ರಹ್ಮಣ್ಯ ವಾಗ್ಲೆ ಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಯುವ ವೃಂದದ ಸದಸ್ಯರೆಲ್ಲರು ರಕ್ತದಾನ ಮಾಡಿದರು, ರಕ್ತ ನಿಧಿಯ ಡಾ| ದಿವ್ಯರವರು ರಕ್ತ ನಿಧಿಯ ವತಿಯಿಂದ ಕೃತಜ್ಞತೆ ಸಲ್ಲಿಸಿದರು.
ಬಂಟಕಲ್ಲಿನಿಂದ ಮಣಿಪಾಲಕ್ಕೆ ಹೋಗಿ ಬರಲು ಮಣಿಪಾಲ ರಕ್ತ ನಿಧಿಯಿಂದ ಬಸ್ ನ ವ್ಯವಸ್ಥೆಯನ್ನು ಮಾಡಲಾಗಿತ್ತು.
