ಶಿರ್ವ : ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕರು ನೀರು ಪಾಲು
Thumbnail
ಕಾಪು : ಶಿರ್ವ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಗ್ರಾಮದ ಪಾಂಬೂರು ಕಬೆಡಿ ಪರಿಸರದಲ್ಲಿ ಇರುವ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲಾದ ಘಟನೆ ಇಂದು ಸಂಜೆ ನಡೆದಿದೆ. ಪಾಂಬೂರಿನಲ್ಲಿ ಕೂಲಿ ಕಾರ್ಮಿಕರಾಗಿದ್ದು ಶಂಕರಪುರ ಸರ್ಕಾರಿ ಗುಡ್ಡೆ ನಿವಾಸಿಗಳೆಂದು ತಿಳಿದು ಬಂದಿದೆ. ಶಂಕರಪುರ ಸುಭಾಸ್ ನಗರದ ಕ್ಯಾಲ್ವಿನ್ ಕಸ್ತಲಿನೊ (21), ಜಾಬೀರ್ (18), ರಿಜ್ವಾನ್ (28) ಎಂದು ತಿಳಿದು ಬಂದಿದೆ. ನದಿಯಿಂದ ಈಶ್ವರ ಮಲ್ಪೆಯವರ ಸಹಕಾರದಿಂದ ಮೂವರ ಶವವನ್ನು ದಡಕ್ಕೆ ತರಲಾಗಿದೆ.
Additional image
02 May 2021, 07:11 PM
Category: Kaup
Tags: