ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ವತಿಯಿಂದ ರಕ್ತದಾನ ಶಿಬಿರ
Thumbnail
ಕಾಪು : ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ಮತ್ತು ಅಭಯಹಸ್ತ ಹೆಲ್ಪ್ ಲೈನ್ ಉಡುಪಿ ವತಿಯಿಂದ ಇಂದು ರಕ್ತದಾನ ಶಿಬಿರವು ಕಳತ್ತೂರು ಶೇಖರ ಶೆಟ್ಟಿಯವರ ಕುಶಲ ಶೇಖರ ಶೆಟ್ಟಿ ಇಂಟರ್ನ್ಯಾಷನಲ್ ಆಡಿಟೋರಿಯಂನಲ್ಲಿ ನಡೆಯಿತು. ಒಟ್ಟು 104 ಮಂದಿ ಕಾರ್ಯಕರ್ತರು ರಕ್ತದಾನ ಮಾಡಿದರು. ಶಿಬಿರವನ್ನು ಉದ್ಯಮಿಗಳಾದ ಹರೀಶ್ ಶೆಟ್ಟಿ ಗುರ್ಮೆಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹಶಾರೀರಿಕ ಪ್ರಮುಖರಾದ ಸತೀಶ್ ಕುತ್ಯಾರ್ , ಉದ್ಯಮಿಗಳಾದ ಜಿನೇಶ್ ಬಲ್ಲಾಳ್, ಪ್ರವೀಣ್ ಗುರ್ಮೆ , ಹಿಂ.ಜಾ.ವೇ ಶಿರ್ವ ವಲಯದ ಗೌರವಾಧ್ಯಕ್ಷರಾದ ರಂಗನಾಥ ಶೆಟ್ಟಿ ,ಶಿರ್ವ ವಲಯದ ಹಿಂ.ಜಾ.ವೇ ಅಧ್ಯಕ್ಷರು ರಕ್ಷಿತ್ ಪೂಜಾರಿ ಶಿರ್ವ, ಸಮಾಜ ಸೇವಕರಾದ ನೀತಾ ಪ್ರಭು ,ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ,ಮಹಾಕಾಳಿ ಸಮೂಹ ಸಂಸ್ಥೆ ಉಡುಪಿಯ ಮಾಲಕರಾದ ನಾರಾಯಣ್ ತಂತ್ರಿ , ಹಿಂ.ಜಾ.ವೇ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತ್ ನಾಯಕ್ , ಹಿಂಜಾವೇ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ , ಹಿಂಜಾವೇ ಉಡುಪಿ ಜಿಲ್ಲಾ ನಿಧಿಪ್ರಮುಖರಾದ ಉಮೇಶ್ ಸೂಡ , ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ರಾಜೇಶ ಉಚ್ಚಿಲ , ಹಿಂಜಾವೇ ಕಾಪು ತಾಲ್ಲೂಕು ಅಧ್ಯಕ್ಷರಾದ ಶಶಿಧರ ಹೆಗ್ಡೆ ಹಿರೇಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಹಿಂಜಾವೇ ಕಾಪು ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಗುರುಪ್ರಸಾದ್ ಸೂಡ ಸರ್ವರನ್ನು ಸ್ವಾಗತಿಸಿ , ಹಿಂಜಾವೇ ಕಾಪು ತಾಲೂಕು ಪ್ರಚಾರ ಪ್ರಮುಖ್ ಸಂತೋಷ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Additional image Additional image
05 May 2021, 09:31 PM
Category: Kaup
Tags: