ಬಡಾ ಎರ್ಮಾಳು ನಾತು ಪೂಜಾರಿ ನಿಧನ
ಕಾಪು : ಬಡಾ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಕುದ್ರೊಟ್ಟು ಬ್ರಹ್ಮಬೈದರ್ಕಳ ಗರಡಿಯ ಮಾಜಿ ಅಧ್ಯಕ್ಷರು ಹಾಗೂ ಬಡಾ ಎರ್ಮಾಳು ನಡಿಕರೆಯ ಗುರಿಕಾರರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇದ್ದುಕೊಂಡು ಜೀವನದ ಸುದೀರ್ಘ ಕಾಲ ಮೂರ್ತೆದಾರಿಕೆ ಮಾಡಿಕೊಂಡು ಜನಾನುರಾಗಿಯಾಗಿದ್ದ ಬಿಲ್ಲವ ಮುಖಂಡ ನಾತುಪೂಜಾರಿ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
