ಎರ್ಮಾಳು ಕಡಲ ಕಿನಾರೆಯಲ್ಲಿ ಮೃತ ದೇಹ ಪತ್ತೆ
Thumbnail
ಕಾಪು : ಮಂಗಳೂರು ಎನ್ಎಂಪಿಟಿ ಕಡಲ ತೀರದಲ್ಲಿ ಲಂಗರು ಹಾಕುವ ಹಡಗುಗಳ ಸೇವೆಗಾಗಿ ಬಳಸುವ ಟಗ್ ಪಡುಬಿದ್ರಿ ಕಾಡಿಪಟ್ಣ ಸಮೀಪ ಪತ್ತೆಯಾಗಿತ್ತು. ಮಾಹಿತಿಗಳ ಪ್ರಕಾರ 9 ಜನರು ಇದರಲ್ಲಿದ್ದರು. ಇತ್ತ ಎರ್ಮಾಳು ಕಡಲ ಕಿನಾರೆಯಲ್ಲಿ ಟಗ್ ನಲ್ಲಿದ್ದ ಓರ್ವ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಸೂರಿ ಶೆಟ್ಟಿ ಕಾಪು ಇವರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೋಲೀಸರು ಆಗಮಿಸಿದ್ದರು. ಗಾಳಿ, ಮಳೆಯ ರಭಸಕ್ಕೆ ಸಿಲುಕಿದ ಟಗ್ ನಲ್ಲಿದ್ದ ಇಬ್ಬರು ಕಟಪಾಡಿಯಲ್ಲಿ ಮತ್ತು ಓರ್ವ ಮಲ್ಪೆಯಲ್ಲಿ ದಡ ಸೇರಿದ್ದಾರೆ. ಸ್ಥಳೀಯರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿರುತ್ತಾರೆ.
Additional image
16 May 2021, 12:30 PM
Category: Kaup
Tags: