ಹೋಂ ಡಾಕ್ಟರ್ ಫೌಂಡೇಶನ್ ಪಲ್ಸ್ ಆಕ್ಸಿಮೀಟರ್ ಅಭಿಯಾನ
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ಬಡ ಕರೋನಾ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಪಲ್ಸ್ ಆಕ್ಸಿಮೀಟರ್ ಅಭಿಯಾನ ಕಾಯ೯ಕ್ರಮದ ಅಂಗವಾಗಿ
ಉಪ್ಪುರು ಗ್ರಾಮ ಪಂಚಾಯತ್ ಗೆ ಪಲ್ಸ್ ಆಕ್ಸಿಮೀಟರ್ ಯಂತ್ರಗಳನ್ನು ಹಸ್ತಾಂತರಿಸಲಾಯಿತು.
ಸದಸ್ಯರಾದ ಡಾ.ಶಶಿಕಿರಣ್ ಶೆಟ್ಟಿ ,ರಾಘವೇಂದ್ರ ಪೂಜಾರಿ ,ಸುನಿಲ್ ಶೆಟ್ಟಿ ,ರಾಘವೇಂದ್ರ ಪ್ರಭು ಕರ್ವಾಲುರವರು ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದಭ೯ ಸದಸ್ಯರು, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ,ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
