ಕೊರಗ ಕಾಲನಿ ನಿವಾಸಿಗಳಿಗೆ ಶ್ರೀ ಕೃಷ್ಣ ಮಠದಿಂದ ಊಟದ ವ್ಯವಸ್ಥೆ
Thumbnail
ಉಡುಪಿ : ಕರೋನಾ ಲಾಕ್ ಡೌನ್ ನಿಂದ ಬಹಳಷ್ಟು ತೊಂದರೆಗೆ ಒಳಗಾದ ಮಣಿಪಾಲ ಸರಳೇಬೆಟ್ಟು ವಿಜಯನಗರ ಕೊರಗರ ಕಾಲನಿಯ 60 ಕುಟುಂಬಗಳಿಗೆ ಶ್ರೀ ಕೃಷ್ಣ ಮಠ ಪಯಾ೯ಯ ಶ್ರೀ ಗಳು ಕೊಡಮಾಡಿದ ಊಟದ ವ್ಯವಸ್ಥೆಯನ್ನು ಹೋo ಡಾಕ್ಟರ್ ಫ್oಡೇಶನ್ ವತಿಯಿಂದ ನೀಡಲಾಯಿತು. 15 ಕುಟುಂಬದ ಸುಮಾರು 80 ಜನರಿಗೆ ಊಟ ಒದಗಿಸಲಾಗಿದ್ದು , ಲಾಕ್ ಡೌನ್ ಮುಗಿಯುವರೆಗೆ ಇದು ಮುಂದುವರೆಯಲಿದೆ. ಮೇ.27 ರಂದು ನಡೆದ ಈ ಕಾಯ೯ಕ್ರಮದಲ್ಲಿ ಶ್ರೀ ಕೃಷ್ಣ ಮಠದ ವ್ಯವಸ್ಥಾಪಕ ಗೋವಿಂದ ರಾಜ್, ಪ್ರದೀಪ್, ವೈ.ಎನ್ ರಾಮಚಂದ್ರ ರಾವ್,ಹೋo ಡಾಕ್ಟರ್ ಫೌಂಡೇಷನ್ ಸದಸ್ಯರಾದ ಡಾII ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಸ್ಪಂದನ ವಿಶೇಷ ಶಾಲೆಯ ಪ್ರಾಂಶುಪಾಲ ಜನಾಧ೯ನ್, ಸವಿತಾ ಶೆಟ್ಟಿ, ಗಣೇಶ್, ರಾಘವೇಂದ್ರ ಪ್ರಭು,ಕವಾ೯ಲು ಮುಂತಾದವರಿದ್ದರು.
27 May 2021, 09:10 PM
Category: Kaup
Tags: