ಪಾದೆಬೆಟ್ಟು : 50 ಕುಟುಂಬಗಳಿಗೆ ದಿನಸಿ ಸಾಮಾಗ್ರಿ, ಹಾಲು ವಿತರಣೆ
Thumbnail
ಪಡುಬಿದ್ರಿ : ಶ್ರೀ ಸುಬ್ರಹ್ಮಣ್ಯ ಯುವಕ-ಯುವತಿ ವೃಂದ ಪಾದೆಬೆಟ್ಟು, ಪಡುಬಿದ್ರಿ ಇದರ ಆಶ್ರಯದಲ್ಲಿ ಕೊರೊನ ಪೀಡಿತರು ಮತ್ತು ತೀರ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ನ್ನು ಮಲಬಾರ್ ಗೋಲ್ಡ್ & ಡೈಮಂಡ್ ಮತ್ತು ಸುಬ್ರಹ್ಮಣ್ಯ ಆಚಾರ್ಯ ದಂಪತಿಗಳ ಸಹಾಯದಿಂದ ಸುಮಾರು 50 ಕುಟುಂಬಗಳಿಗೆ ದಿನಸಿ ಸಾಮಾಗ್ರಿ ಮತ್ತು ದೀಪಕ್ ಎಲ್ಲೂರ್ ಕೊಡ ಮಾಡಿದ 80 ಲೀಟರ್ ಹಾಲನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ರವಿ ಶೆಟ್ಟಿ, ಸದಸ್ಯರಾದ ಅಶೋಕ್ ಪೂಜಾರಿ, ಶಿವಮ್ಮ, ಗೀತಾ ಪ್ರಭಾಕರ್, ಶೋಭಾ ಜೆ. ಶೆಟ್ಟಿ, ಸಂದೇಶ್ ಶೆಟ್ಟಿ, ಯುವಕ ವೃಂದದ ಗೌರವಾಧ್ಯಕ್ಷರಾದ ಜೀತ್ಹೇಂದ್ರ ಶೆಟ್ಟಿ, ವಿಷ್ಣುಮೂರ್ತಿ ಆಚಾರ್ಯ, ಹರೀಶ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾರ್ಯದರ್ಶಿ ಸುರೇಶ್ ಪೂಜಾರಿ, ಯುವತಿ ವೃಂದ ಕಾರ್ಯದರ್ಶಿ ಸೌಮ್ಯ ಎಚ್. ಆಚಾರ್ಯ, ಶ್ರೀಮತಿ ಸುನಿತಾ ಆಚಾರ್ಯ ಸದಾನಂದ ಪೂಜಾರಿ, ರಾಘವೇಂದ್ರ ಆಚಾರ್ಯ, ದಿನೇಶ್ ಶೆಟ್ಟಿ, ಯೋಗೀಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
Additional image
04 Jun 2021, 09:33 PM
Category: Kaup
Tags: