ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದಿಂದ 22 ನೇ ಸೇವಾ ಯೋಜನೆ
Thumbnail
ಮಂಗಳೂರು : ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಮೈರಲ್ಕೆ ನಿವಾಸಿ ಸುರೇಶ್ ಪೂಜಾರಿ (44 ವರ್ಷ) ಇವರು ವೃತ್ತಿಯಲ್ಲಿ ಅಟೋಚಾಲಕರಾಗಿದ್ದು, ತೀರಾ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ. ಮನೆಯಲ್ಲಿ ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ ಇವರಿಗೆ ಈ ಕೊರೊನ ಎನ್ನುವ ಮಹಾ ಮಾರಿಯ ಲಾಕ್ ಡೌನ್ ಸಂದರ್ಭದಲ್ಲಿ ಅನಾರೋಗ್ಯಕ್ಕೆ (ಮಿದುಳಿನ ರಕ್ತಸ್ರಾವ) ಒಳಗಾಗಿದ್ದು "ಬಲಿಷ್ಠ ಬಿಲ್ಲವೆರ್" ವಾಟ್ಸಾಪ್ ತಂಡದ ದಾನಿಗಳ ಸಹಕಾರದಿಂದ ಇವರ ಚಿಕಿತ್ಸೆಗಾಗಿ 10,000₹ ರೂಪಾಯಿಗಳನ್ನು ಬೆಳ್ತಂಗಡಿಯ ಮಾಜಿ ಶಾಸಕರಾದ ವಸಂತ ಬಂಗೇರರವರ ಮೂಲಕ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬಲಿಷ್ಠ ಬಿಲ್ಲವೆರ್ ತಂಡದ ಮುಖ್ಯಸ್ಥರುಗಳಾದ ಸನತ್ ಅಂಚನ್, ಸಂಪತ್ ಅಂಚನ್ ಹಾಗೂ ಸದಸ್ಯರುಗಳಾದ ಸಂತೋಷ್ ಅಂಚನ್, ಹೇಮಂತ್ ಕೋಟ್ಯಾನ್, ರಾಜೇಶ್ ಪೂಜಾರಿ ಮದ್ದಡ್ಕ, ಸಂದೀಪ್ ಸುವರ್ಣ ಕುಕ್ಕೇಡಿ, ತಿಲಕ್ ಕೋಟ್ಯಾನ್ ಮತ್ತು ಪ್ರಜ್ಞಾ ಓಡಿಲ್ನಾಳ ಉಪಸ್ಥಿತರಿದ್ದರು.
05 Jun 2021, 09:37 PM
Category: Kaup
Tags: