ಉಡುಪಿ : ಲಾಕ್‌ಡೌನ್‌ನ್ನು ಮುಂದುವರೆಸುವುದೇ ಅಥವಾ ಬೇಡವೇ ? - ಮಂಗಳವಾರ ನಿರ್ಧಾರ
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ 50 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿರುವ ಗ್ರಾಮ ಹಾಗೂ ಅಂತಹ ಪಂಚಾಯತ್‌ಗಳ ಲಗತ್ತಾಗಿರುವ ಸುಮಾರು 40 ಗ್ರಾಮ ಪಂಚಾಯತ್‌ಗಳನ್ನು ಈಗಾಗಲೇ ಸಂಪೂರ್ಣವಾಗಿ ಲಾಕ್‌ಡೌನ್ ಆದೇಶ ಮಾಡಲಾಗಿದೆ.
ಇಂತಹ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಸೋಮವಾರ (07-06-2021) ಮತ್ತು ಮಂಗಳವಾರ (08-06-2021) ದಂದು ಪೂರ್ವಾಹ್ನ 6 ಗಂಟೆಯಿಂದ ಪೂರ್ವಾಹ್ನ 10 ಗಂಟೆವರೆಗೆ ತಮಗೆ ಅಗತ್ಯವಾಗಿ ಬೇಕಾಗಿರುವ ಆಹಾರ ಸಾಮಾಗ್ರಿಗಳನ್ನು ಖರೀದಿ ಮಾಡಲು ಅನುಕೂಲವಾಗುವಂತೆ ವಿನಾಯಿತಿ ನೀಡಲಾಗಿರುತ್ತದೆ.
ಸದ್ರಿ ಗ್ರಾಮ ಪಂಚಾಯತ್‌ಗಳಲ್ಲಿ ಲಾಕ್‌ಡೌನ್‌ನ್ನು ಮುಂದುವರೆಸುವುದೇ ಅಥವಾ ಬೇಡವೇ ಎಂಬ ಬಗ್ಗೆ ದಿನಾಂಕ ಮಂಗಳವಾರ (08-06-2021) ದಂದು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
