ಕೊಲ್ಲೂರು : ಕಲ್ಯಾಣಿಗುಡ್ಡೆ ಬಡ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದವರಿಗೆ ಕಿಟ್ ವಿತರಣೆ ಮತ್ತು ಶಾಶ್ವತ ಸೂರಿಗಾಗಿ ಮನವಿ
ಉಡುಪಿ : ಕೋರೋನಾ ಮಹಾಮಾರಿ 2ನೇ ಅಲೆಗೆ ಕಲ್ಯಾಣಿಗುಡ್ಡೆ ಭಾಗದ ಪರಿಶಿಷ್ಟ ಪಂಗಡ ಬುಡಕಟ್ಟು ಜನರ ಸಂಕಷ್ಟವನ್ನು ಅರಿತು ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ ರವರು ಹಿಂದೆ ಕುಂದಾಪುರದ ಎಸಿಪಿ, ಪ್ರಸುತ್ತ ಮಂಗಳೂರಿನ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಹರಿರಾಮ್ ಶಂಕರ್ ರವರಿಗೆ ಪ್ರಸ್ತುತ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಸ್ಥಿತಿಗತಿಗಳ ಮನವರಿಕೆ ಮಾಡಿ ಸಹಾಯ ಹಸ್ತ ಕೇಳಿದಾಗ ಡಿಸಿಪಿ ಹರಿರಾಮ್ ಶಂಕರ್ ಸ್ಪಂದಿಸುವುದರ ಜೊತೆಗೆ ಮತ್ತೊಮ್ಮೆ ಮಾನವೀಯತೆಯಿಂದ ಮೆರೆದಿದ್ದಾರೆ.
ಹರೆರಾಮ ಶಂಕರ್, ಮಂಗಳೂರು ಡಿಸಿಪಿ
ಡಿಸಿಪಿ ಹರೇರಾಮ್ ಶಂಕರ್ ರವರ ಮನವಿಗೆ ಒಗೊಟ್ಟ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಕೊಲ್ಲೂರು ಸಮೀಪದ ಕಲ್ಯಾಣಿಗುಡ್ಡೆಯ ಬಡ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಸುಮಾರು ಮೂವತ್ತು ಕುಟುಂಬಗಳಿಗೆ ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್ ನ ಡಾಕ್ಟರ್ ರಂಜನ್ ಶೆಟ್ಟಿ ಅವರ ಸೂಚನೆಯ ಮೇರೆಗೆ ಇಂದು ಕೊಲ್ಲೂರು ಸರಕಾರಿ ಶಾಲೆಯ ವಠಾರದಲ್ಲಿ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.
ಈ ಹಿಂದೆ ಕುಂದಾಪುರದ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹರೇರಾಮ್ ಶಂಕರ್ ರವರು ಕಲ್ಯಾಣಿಗುಡ್ಡೆಯ ಬಡ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಗುಡಿಸಲಲ್ಲಿ ವಾಸಿಸುವ ಪರಿವಾರದವರನ್ನು ಖುದ್ದಾಗಿ ಭೇಟಿ ನೀಡಿ ಅವರ ಸುಖದುಃಖಗಳನ್ನು ವಿಚಾರಿಸಿದ್ದರು, ಮಾತ್ರವಲ್ಲದೆ ಇವರುಗಳಿಗೆ ಶಾಶ್ವತ ಸೂರು ಕಲ್ಪಿಸಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಶಾಸಕರ ಗಮನಕ್ಕೂ ತಂದಿದ್ದರು. ಇಂದು ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಅಧ್ಯಕ್ಷರಾದ ಕುಶಾಲ್, ಉಪಾಧ್ಯಕ್ಷರಾದ ಶಿವರವರು ನೆರೆದಿರುವ ಮುಖಂಡರುಗಳ ಸಮ್ಮುಖದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ 21 ಪರಿವಾರದವರಿಗೆ ಶಾಶ್ವತ ಸೂರು ಕಲ್ಪಿಸಬೇಕೆಂದು ಮನವಿ ನೀಡಿದರು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂದೇಶ್ ಭಟ್, ಉಪಾಧ್ಯಕ್ಷರಾದಂತ ಹರೀಶ್ ಶೆಟ್ಟಿ ಕೊಲ್ಲೂರು ಹಾಗೂ ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಮಚ್ಚಟ್ಟು, ಕೋಶಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ ಹುಂಚನಿ, ಸಚಿನ್ ಶೆಟ್ಟಿ ವಕ್ವಾಡಿ, ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭಾ ಸದಸ್ಯ ಪ್ರಭಾಕರ.ವಿ, ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ರುಕ್ಕನ್ ಗೌಡ, ಕರುಣ್ ಶೆಟ್ಟಿ ಕಾನಕಿ ಮತ್ತು ಅರುಣ್ ಕುಮಾರ್ ಶೆಟ್ಟಿ , ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
