ಪೌರ ಕಾರ್ಮಿಕರಿಗೆ ಡೈನಾಮಿಕ್ ಇನ್ಫ್ರಾಟೆಕ್ ವತಿಯಿಂದ ಕಿಟ್ ವಿತರಣೆ
Thumbnail
ಕುಂದಾಪುರ : ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆ ಯಾಗಿದ್ದು, ಸ್ವಚ್ಛತೆಯ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು, ಜನರ ಮನಸ್ಥಿತಿ ಪರಿವರ್ತನೆ ಆಗಬೇಕು, ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾದದು, ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆಯ ಕುರಿತು ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿಯವರು, ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಇಂದು ಕುಂದಾಪುರ ಪುರಸಭೆ 60 ಪೌರಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು. ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಕುಂದಾಪುರ ಮಂಡಲ ಕ್ಷೇತ್ರ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆಯವರು ಪೌರ ಕಾರ್ಮಿಕರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೌರಕಾರ್ಮಿಕರು ಕರೋನಾ ವಾರಿಯರ್ಸ್ ಗಳು ಜೀವದ ಹಂಗನ್ನು ತೊರೆದು ದುಡಿದವರು, ಪೌರಕಾರ್ಮಿಕರನ್ನು ಗುರುತಿಸಿ ಫುಡ್ ಕಿಟ್ ನೀಡಿದ ದಾನಿಗಳನ್ನು ಅಭಿನಂದಿಸಿದರು. ಪೌರಕಾರ್ಮಿಕರು ಕೇವಲ ಕೋರೋನಾ ಸಂದರ್ಭದಲ್ಲಿ ಮಾತ್ರ ಕೋರೋನಾ ವಾರಿಯರ್ಸ್ ಅಲ್ಲ, ಅವರು ಸಮಾಜದ ಡಾಕ್ಟರ್ ಗಳು ಮಾತ್ರವಲ್ಲದೆ ಇಡೀ ಸಮಾಜದ ಸ್ವಸ್ಥವನ್ನು ಕಾಪಾಡುವ ಡಾಕ್ಟರ್ ಗಳು ಎಂದು ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷರಾದ ಮೋಹನ್ ದಾಸ ಶೈಣೆಯವರು ಮುಕ್ತಕಂಠದಿಂದ ಹೊಗಳಿದರು. ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ. ಯವರು ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯವರಿಗೆ ಅಭಿನಂದನೆ ತಿಳಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಮಾಜಿ ಅಧ್ಯಕ್ಷರಾದ ಮೋಹನ್ ದಾಸ ಶೈಣೆ, ದೇವಕಿ ಸಣ್ಣಯ್ಯ, ಬಿಜೆಪಿ ಕುಂದಾಪುರ ಮಂಡಲ ಕ್ಷೇತ್ರ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ, ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ, ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ .ವಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಪುರಸಭೆ ಸದಸ್ಯರಾದ ಅಶ್ವಿನಿ ಪ್ರದೀಪ್, ಸಂತೋಷ್ ಶೆಟ್ಟಿ ಹಾಗೂ ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ದಿನೇಶ್ ಅಮೀನ್, ಧೀರಜ್ ಹೆಜಮಾಡಿ, ಗಣೇಶ್ ಅಮೀನ್, ಭಾಸ್ಕರ್ ಬಿಲ್ಲವ, ಕಮಲಾಕ್ಷ ಯು, ಭಾಸ್ಕರ ವಿಠಲವಾಡಿ, ಹರೀಶ್ ಕುಂದರ್, ದಿವಾಕರ್ ಕಡ್ಗಿಮನೆ, ಅಬ್ದುಲ್ ಅಜೀಜ್, ಹರೀಶ್ ಪುತ್ರನ್, ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಉಪಸ್ಥಿತರಿದ್ದರು.
Additional image Additional image
06 Jun 2021, 10:28 PM
Category: Kaup
Tags: