ಮುಖ್ಯಮಂತ್ರಿ, ಜನಪ್ರತಿನಿಧಿಗಳಿಗೆ ದೈವ ಚಾಕ್ರಿ ವರ್ಗದ ಪರವಾಗಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಟ್ವಿಟರ್ ಅಭಿಯಾನ
Thumbnail
ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಅವರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ನಮ್ಮ ಕರಾವಳಿಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ದೈವಾರಾಧನೆ ಕ್ಷೇತ್ರದಲ್ಲಿ ಸುಮಾರು 60 ಸಾವಿರಕ್ಕಿಂತಲೂ ಹೆಚ್ಚು ದೈವ ಚಾಕ್ರಿ ಮಾಡುವ ವರ್ಗದವರಿದ್ದಾರೆ. ಅದರಲ್ಲಿ ಪರವ ಸಮುದಾಯ, ನಲಿಕೆ ಸಮುದಾಯ, ಪಂಬದ ಸಮುದಾಯ, ಕೊರಗ ಸಮುದಾಯ, ನಾಗಸ್ವರ ಬ್ಯಾಂಡ್ ವಾದಕರು, ದರ್ಶನ ಪಾತ್ರಿಗಳು, ಮಧ್ಯಸ್ಥರು, ಮುಕ್ಕಲಿ, ಮಡಿವಾಳರು, ಬಬ್ಬು ಸ್ವಾಮಿ, ಸ್ವಾಮಿ ಕೂಡುಕಟ್ಟು, ಮುಂಡಾಲ ಸಮುದಾಯ, ಗರಡಿ ಕೂಡುಕಟ್ಟು ಹೀಗೆ ಹಲವಾರು ದೈವ ಚಾಕ್ರಿ ವರ್ಗದವರಿದ್ದಾರೆ ಇವರಿಗೆ ದೈವಾರಾಧನೆ ಅಲ್ಲಿ ಬರುವ ಸಂಭಾವನೆಯಲ್ಲಿ ಕುಟುಂಬವನ್ನು ನಡೆಸ ಬೇಕಾಗಿರುತ್ತದೆ. ಲಾಕ್ ಡೌನ್ ಆದುದರಿಂದ ಯಾವುದೇ ಸೇವಾ ಕಾರ್ಯಗಳು ನಡೆಯುವುದಿಲ್ಲ ಆದ್ದರಿಂದ ಸಂಕಷ್ಟದಲ್ಲಿದ್ದಾರೆ. ಕಳೆದ ಬಾರಿ, ಈ ಬಾರಿ ಸರ್ಕಾರಕ್ಕೆ ಎಷ್ಟು ಮನವಿ ಕೊಟ್ಟರು ಸರ್ಕಾರ ಸ್ಪಂದನೆಗೆ ಬೆಲೆ ಕೊಡುತ್ತಿಲ್ಲ. ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಧಾರ್ಮಿಕ ದತ್ತಿ ಇಲಾಖೆ ಸಚಿವರು ಮುಗ್ಧ ಮನಸಿನ ದೈವ ಚಾಕ್ರಿ ವರ್ಗದವರ ಬೆಂಬಲಕ್ಕೆ ಬರುವುದಿಲ್ಲ. ಯಾಕೆ ಇಷ್ಟು ದಿನ ಇದರ ಬಗ್ಗೆ ಮೌನವೆಂಬುದು ನನ್ನ ಪ್ರಶ್ನೆ. ಇನ್ನು ಮುಂದಿನ ದಿನದಲ್ಲಿ ಅದಕ್ಕೆ ಸೂಕ್ತ ಮನವಿಯನ್ನು ಕೊಡಬೇಕಾಗಿ ಎಲ್ಲಾ ರಾಜಕೀಯ ಮುಖಂಡರಿಗೆ ಮನವಿ ಮಾಡುತ್ತಿದ್ದೇನೆ. ದೈವ ಚಾಕ್ರಿ ಪರವಾಗಿ ಯುವಸಮುದಾಯವನ್ನು ಹೋರಾಟ ಅಭಿಯಾನವನ್ನು ನಡೆಸುತ್ತಿದೆ. ಮೂರು ದಿವಸದ ಹೋರಾಟದಲ್ಲಿ ನೀವು ಮುಖ್ಯಮಂತ್ರಿಗಳಿಗೆ, ರಾಜಕೀಯ ನಾಯಕರಿಗೆ ಯುವ ಸಮುದಾಯದ ನೇತೃತ್ವದಲ್ಲಿ ನಡೆಯುವ ಟ್ವಿಟರ್ ಅಭಿಯಾನ ಚಳುವಳಿ ಟ್ವೀಟ್ ಮಾಡುವುದರ ಮೂಲಕ ದೈವ ಚಾಕ್ರಿ ಅವರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ನಾನು ಬೆಂಬಲ ಕೇಳುತ್ತಿದ್ದೇನೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
07 Jun 2021, 02:22 PM
Category: Kaup
Tags: