ಕುಂದಾಪುರ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಡೈನಾಮಿಕ್ ಇನ್ಫ್ರಾಟೆಕ್ ವತಿಯಿಂದ ಕಿಟ್ ವಿತರಣೆ
Thumbnail
ಕುಂದಾಪುರ, ಜೂ.7 : ಕೋವಿಡ್ ಮಹಾಮಾರಿ 2ನೇ ಅಲೆಗೆ ಜನಸಾಮಾನ್ಯರ ಬವಣೆ ಹೇಳತೀರದು, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಕಾಲೋನಿ ಜನರ ಸಂಕಷ್ಟವನ್ನು ಅರಿತು ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ. ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿಯವರು, ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ಪಾಲುದಾರರಾದ ದಿನೇಶ್ ಅಮೀನ್, ಗಣೇಶ್ ಅಮೀನ್, ಧೀರಜ್ ಹೆಜ್ಮಾಡಿಯವರ ಸಹಭಾಗಿತ್ವದಲ್ಲಿ ನಿನ್ನೆ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಸರಿಸುಮಾರು 25 ಫುಡ್ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಮಾಜಿ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಬಿಜೆಪಿ ಕುಂದಾಪುರ ಮಂಡಲ ಕ್ಷೇತ್ರ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ, ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ, ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಪುರಸಭೆ ಸದಸ್ಯರಾದ ಅಶ್ವಿನಿ ಪ್ರದೀಪ್, ಸಂತೋಷ್ ಶೆಟ್ಟಿ ಹಾಗೂ ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ದಿನೇಶ್ ಅಮೀನ್, ಧೀರಜ್ ಹೆಜಮಾಡಿ, ಗಣೇಶ್ ಅಮೀನ್, ಭಾಸ್ಕರ್ ಬಿಲ್ಲವ, ಕಮಲಾಕ್ಷ ಯು, ಭಾಸ್ಕರ ವಿಠಲವಾಡಿ, ಹರೀಶ್ ಕುಂದರ್, ದಿವಾಕರ್ ಕಡ್ಗಿಮನೆ, ಅಬ್ದುಲ್ ಅಜೀಜ್, ಹರೀಶ್ ಪುತ್ರನ್, ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಉಪಸ್ಥಿತರಿದ್ದರು.
07 Jun 2021, 03:19 PM
Category: Kaup
Tags: