ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವತಿಯಿಂದ ಕಾಪು ತಾಲೂಕಿನ ಸಿ ಪ್ರವರ್ಗದ ದೈವ - ದೇವಸ್ಥಾನಗಳ ಅರ್ಚಕ, ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ
Thumbnail
ಕಾಪು : ಸರಕಾರದ ಆದೇಶದಂತೆ ಕಾಪು ತಾಲೂಕಿನ ಸಿ ಪ್ರವರ್ಗದ 30 ಅಧಿಸೂಚಿತ ಸಂಸ್ಥೆ ದೈವ - ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಅಭಿವೃದ್ಧಿ (ಜಿರ್ಣೋದ್ದಾರ) ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಕಾಪು ತಾಲೂಕಿನ ಉಪ ತಹಸೀಲ್ದಾರ್ ಶ್ರೀ ಚಂದ್ರಹಾಸ್ ಬಂಗೇರ, ವ್ಯವಸ್ಥಾಪನ ಸಮಿತಿಯ ಸರ್ವಸದಸ್ಯರು ಮತ್ತು ದೇವಸ್ಥಾನದ ಕಾರ್ಯ ನಿರ್ವಾಹಣಾಧಿಕಾರಿಯವರು ಉಪಸ್ಥಿತರಿದ್ದರು.
Additional image
08 Jun 2021, 12:32 PM
Category: Kaup
Tags: