ಹಿಂದೂ ಧರ್ಮದ ಅವಹೇಳನ Instagram ಮೇಲೆ ದೂರು ದಾಖಲು
Thumbnail
ಗೂಗಲ್ ಕನ್ನಡವನ್ನು ಪ್ರಪಂಚದ ಕೆಟ್ಟ ಭಾಷೆ ಎಂದು ತೋರಿಸಿತ್ತು , ಅಮೆಜಾನ್ ಕನ್ನಡದ ಹಳದಿ-ಕೆಂಪು ಬಣ್ಣದ ಬಾವುಟ ಹಾಗೂ ಸರ್ಕಾರದ ಲಾಂಛನಗಳನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸಿತ್ತು. ಇದೀಗ Instagram ನ ಸರದಿ , Instagram ಮಾಡಿದ್ದೇನು ? ಹೌದು ದೆಹಲಿಯ ಮನೀಷ್ ಸಿಂಗ್ ರವರು Instagram ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಇದಕ್ಕೆ ಕಾರಣ Instagram ತನ್ನ ಅಪ್ಲಿಕೇಶನ್ ನಲ್ಲಿ ಭಾರತೀಯರಿಗೆ ಅವಮಾನ ಮಾಡಿದೆ. ಭಾರತದಲ್ಲಿ ಅಲ್ಲದೇ ವಿಶ್ವದ ಹಲವು ದೇಶಗಳಲ್ಲಿ ಈಶ್ವರ ದೇವರನ್ನು ಜಾತಿ-ಧರ್ಮ ಭೇದವಿಲ್ಲದೇ ಮಹಾದೇವ , ಶಿವ , ಶಂಕರ , ಕಾಲಭೈರವ ಮುಂತಾದ ಹತ್ತಾರು ಹೆಸರುಗಳಿಂದ ಪೂಜಿಸುತ್ತೇವೆ. ಶಿವ ದೇವರ ಹೆಸರಿನಲ್ಲಿ ಭಾರತದಲ್ಲಿ ಲಕ್ಷಾಂತರ ದೇವಸ್ಥಾನಗಳಿವೆ ಇಷ್ಟೆಲ್ಲಾ ವಿಷಯ ತಿಳಿದಿದ್ದರೂ Instagram ತನ್ನ Giphy ಯಲ್ಲಿ ಶಿವ ದೇವರ ಕುರಿತಾದ ಆಕ್ಷೇರ್ಪಾಹ Giphy ಯನ್ನು ಸೇರಿಸಿದೆ. ಚಿತ್ರವನ್ನು ಸರಿಯಾಗಿ ನೋಡಿದರೆ ಒಂದು ಕೈನಲ್ಲಿ ಅಭಯ ಹಸ್ತ ಹಾಗೂ ಧ್ಯಾನ ಮುದ್ರೆಗಳಿವೆ ಆದರೆ ಅದಕ್ಕೆ ಜೋಡಿಕೊಂಡಂತಿರುವ ಬಲಗೈ ನಲ್ಲಿ ವೈನ್ ಹಿಡಿದಂತೆ ಚಿತ್ರಿಸಲಾಗಿದೆ ಜೊತೆಗೆ ಎಡಗೈನಲ್ಲಿ ಮೊಬೈಲ್ ‌ಹಾಗೂ ಕಿವಿಗೆ ಹೆಡ್ಫೋನ್ ಧರಿಸಿದಂತೆ ಅಸಭ್ಯವಾಗಿ ಚಿತ್ರಿಸಲಾಗಿದೆ. ಈ ಚಿತ್ರ ಕೋಟ್ಯಾಂತರ ಧರ್ಮಾಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದಲ್ಲದೆ ನೆಟ್ಟಿಗರು ಈ ಘಟನೆಯನ್ನು ಖಂಡಿಸಿದ್ದಾರೆ. ಇನ್ನಾದರೂ ಸರ್ಕಾರ ಇಂತಹ ಸಂಸ್ಥೆ ಅಥವಾ ವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ. ಅಭಿಷೇಕ್ ರಾವ್ TECH NEWS Click Here To Watch YOUTUBE Video
11 Jun 2021, 07:53 PM
Category: Kaup
Tags: