ಕೊರೋನಾ ಸಂದರ್ಭ ನಿಸ್ವಾರ್ಥ ಸೇವೆಗೈಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವ, ಆಹಾರ ಕಿಟ್ ವಿತರಣೆ
Thumbnail
ಕುಂದಾಪುರ : ಪ್ರಾಣವನ್ನೇ ಪಣಕ್ಕಿಟ್ಟು ಮಹಾಮಾರಿ ಕೊರೋನಾ 2ನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯ. ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯ ಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾಗ ಅವರ ಮನವೊಲಿಸಿ, ದುರ್ಗಮ, ಅಪಾಯಕಾರಿ ಜಾಗಕ್ಕೆ ತೆರಳಿ ಆಶಾ ಕಾರ್ಯಕರ್ತೆಯರು ಕೊರೋನಾ ಜಾಗೃತಿ ಮೂಡಿಸಿ ನಿಸ್ವಾರ್ಥ ಸೇವೆಯನ್ನು ಮಾಡುವ ಆಶಾ ಕಾರ್ಯಕರ್ತೆಯರನ್ನು ಮುಕ್ತ ಕಂಠದಿಂದ ಹೊಗಳಿ, ಅವರನ್ನು ಶಾಲು ಹೊದಿಸಿ, ಆಹಾರದ ಕಿಟ್ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭಾ ಸದಸ್ಯ ಪ್ರಭಾಕರ.ವಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ, ಸತೀಶ್ ಉಷಾ ಹೋಟೆಲ್ ಮಾಲಕರು ಕುಂದಾಪುರ, ಗಣೇಶ ಜೋಗಿ ಶ್ರೀದೇವಿ ಕಂಗನಾ ಸ್ಟೋರ್ ಕುಂದಾಪುರ, ಹರೀಶ್ ಮೆಸ್ಕಾಂ ಗುತ್ತಿಗೆದಾರರು ಕುಂದಾಪುರ, ಸತೀಶ್ ಜೋಗಿ ಬಿ.ಸಿ.ಎಮ್. ಹಾಸ್ಟೆಲ್ ಕುಂದಾಪುರ ಉಪಸ್ಥಿತರಿದ್ದರು.
Additional image
13 Jun 2021, 10:36 AM
Category: Kaup
Tags: