ಉಡುಪಿ : ವನಮಹೋತ್ಸವ ಕಾಯ೯ಕ್ರಮ
Thumbnail
ಉಡುಪಿ, ಜೂನ್ 20 : ಉಡುಪಿ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟ, ಸುವಣ೯ ಎಂಟರ್ ಪೈಸಸ್ ಬ್ರಹ್ಮಾವರ ಮತ್ತು ಭಾರತೀಯ ವಿಕಾಸ್ ಟ್ರಸ್ಟ್ ಮಣಿಪಾಲ ಇದರ ವತಿಯಿಂದ ಬಿವಿಟಿ ಆವರಣದಲ್ಲಿ ವನಮಹೋತ್ಸವ ಕಾಯ೯ಕ್ರಮ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮಾತನಾಡಿ , ಈ ಕೋವಿಡ್ ಸಂದಭ೯ದಲ್ಲಿ ನಾವು ಪರಿಸರಕ್ಕೆ ಪೂರಕವಾಗಿ ವತ೯ನೆ ಮಾಡಬೇಕಾದ ಅಗತ್ಯತೆಯಿದೆ. ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡುದರಿಂದ ಪರಿಸರ ಮತ್ತು ಆರೋಗ್ಯ ಉತ್ತಮವಾಗಲು ಸಾಧ್ಯ ಎಂದರು. ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಹ ಸಂಚಾಲಕ ಡಾ|| ರಾಮಚಂದ್ರ ಕಾಮತ್ ಪರಿಸರದ ಕುರಿತು ಮತ್ತು ಮುಂದಿನ ಯೋಜನೆ ಕುರಿತು ಮಾತನಾಡಿದರು. ಈ ಸಂದಭ೯ದಲ್ಲಿ ಸೆಲ್ಕೋ ಸೋಲಾರ್ ಎಜಿಎಂ ಜಗದೀಶ್ ಪೈ, ಡಾll ವಿದ್ಯಾಧರ ಶೆಟ್ಟಿ, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಬಿವಿಟಿ ಕಾಯ೯ ನಿವಾ೯ಹಕ ಮನೋಹರ್ ಕಟ್ಗೇರಿ, ರಾಘವೇಂದ್ರ ಪ್ರಭು,ಕವಾ೯ಲು ಮತ್ತಿತರರು ಉಪಸ್ಥಿತರಿದ್ದರು.
20 Jun 2021, 12:45 PM
Category: Kaup
Tags: