ಕಾಪು : ಕೊರಗ ಸಮುದಾಯಕ್ಕೆ ಸವಲತ್ತು ವಿತರಣೆ
Thumbnail
ಕಾಪು : ಕುಂಜೂರಿನ ಶ್ರೀ ದುರ್ಗಾ ಸೇವಾ ಸಮಿತಿಯ ವತಿಯಿಂದ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಭಂಡಸಾಲೆ, ಎಲ್ಲೂರು, ಇರಂದಾಡಿ, ಗುತ್ತಬೆಟ್ಟು ಮತ್ತು ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಿಯೂರು ಕೊರಗ ಕಾಲೊನಿ (ಪರಿಶಿಷ್ಟ ಪಂಗಡ) ಗಳಲ್ಲಿ ವಾಸಿಸುತ್ತಿರುವ ೧೯ ಕೊರಗ ಕುಟುಂಬಗಳ ೯೦ ಮಂದಿ ಫಲಾನುಭವಿಗಳ ಮನೆಗೆ ತೆರಳಿ ಚಾಪೆ, ಬೆಡ್ ಶೀಟ್ ಮತ್ತು ಕೊಡೆಗಳನ್ನು ವಿತರಿಸಲಾಯಿತು. ಸವಲತ್ತು ವಿತರಣೆಗೆ ಚಾಲನೆ ನೀಡಿದ ದುರ್ಗಾ ಸೇವಾ ಸೇವಾ ಸಮಿತಿಯ ಅಧ್ಯಕ್ಷ ಕೆ. ಎಲ್. ಕುಂಡಂತಾಯ ಮಾತನಾಡಿ‌ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳನ್ನು ನಡೆಸುವ ಉದ್ದೇಶದೊಂದಿಗೆ ಪ್ರಾರಂಭಿಸಲಾಗಿರುವ ಸೇವಾ ಸಮಿತಿಯ ಮೂಲಕ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ತ್ರಿಕಾಲ ಪೂಜೆ ಸೇವೆ ನಡೆಸಲಾಗಿತ್ತು. ಸಮಿತಿಯ ಮಹದುದ್ದೇಶಗಳಿಗೆ ದಾನಿಗಳ ದೇಣಿಗೆಯ ಮೊತ್ತವನ್ನು‌ ಈ ಸಾಮಾಜಿಕ ಸೇವಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಇದು ಪ್ರಥಮ ಯೋಜನೆಯಾಗಿದ್ದು ಮುಂದೆ ಇನ್ನಷ್ಟು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳುವ ಉದ್ದೇಶ ಹೊಂದಲಾಗಿದೆ ಎಂದರು. ಕುಂಜೂರು ಶ್ರೀ ದುರ್ಗಾ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀವತ್ಸ ರಾವ್ ಕುಂಜೂರು, ಜೊತೆ ಕಾರ್ಯದರ್ಶಿ ರಾಕೇಶ್ ಕುಂಜೂರು, ಸಂಘಟನಾ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುಂಜೂರು, ಎಲ್ಲೂರು ಗ್ರಾ. ಪಂ. ಸದಸ್ಯ ಸಂತೋಷ್ ಶೆಟ್ಟಿ, ಶ್ರೀ ದುರ್ಗಾ ದೇವಸ್ಥಾನದ ಪ್ರಬಂಧಕ ರಾಘವೇಂದ್ರ ಶೆಟ್ಟಿ, ಶ್ರೀ ದುರ್ಗಾ ಮಿತ್ರ ವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ, ಸಮಿತಿ ಸದಸ್ಯರಾದ ಭಾರ್ಗವ ಎಲ್. ಕುಂಡಂತಾಯ, ರಾಜ ಶೆಟ್ಟಿ ಗೆರಪಾಯಿಮನೆ ಮೊದಲಾದವರು ಉಪಸ್ಥಿತರಿದ್ದರು.
Additional image
20 Jun 2021, 06:28 PM
Category: Kaup
Tags: