ಪಡುಬಿದ್ರಿ : 300 ಕುಟುಂಬಗಳಿಗೆ ಅಕ್ಕಿ ವಿತರಣೆ
Thumbnail
ಪಡುಬಿದ್ರಿ : ಕೊರೊನಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಂಟಾದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಪಡುಬಿದ್ರಿ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 10ರ ಸದಸ್ಯರಾದ ನಿಯಾಝ್ , ಸಂಜೀವಿ ಪೂಜಾರ್ತಿ, ನವೀನ್ ಎನ್. ಶೆಟ್ಟಿ, ಶಶಿಕಲಾ ಅವರು ದಾನಿಗಳ ಸಹಾಯದಿಂದ ತಮ್ಮ ವಾರ್ಡ್‌ನ 300 ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿಯನ್ನು ವಿತರಿಸಿದರು. ಸುಜ್ಲಾನ್ ಆರ್‌ಆರ್ ಕಾಲನಿಯ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಅಕ್ಕಿಯನ್ನು ವಿತರಿಸಿದರು. ನವೀನ್‌ಚಂದ್ರ ಜೆ. ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಮುಂದಾಳು ಬುಡಾನ್ ಸಾಹೇಬ್, ಸುಜ್ಲಾನ್ ಆರ್‌ಆರ್ ಕಾಲನಿಯ ಉಪಾಧ್ಯಕ್ಷ ಮೊಯಿದಿನ್, ರಮೀಝ್ ಹುಸೇನ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಾಫಿ ಎಂ.ಎಸ್, ಜ್ಯೋತಿ ಮೆನನ್, ಮೊಹಮಡನ್ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷ ನಝೀಬ್, ಹಕೀಂ , ಅನ್ವರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Additional image
21 Jun 2021, 11:52 AM
Category: Kaup
Tags: