ಕುಂದಾಪುರ : ಅಂಬೇಡ್ಕರ್ ಭವನದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ
Thumbnail
ಉಡುಪಿ : ಕುಂದಾಪುರದ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಅಂಬೇಡ್ಕರ್ ಭವನದಲ್ಲಿ ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತು ಪುರಸಭಾ ಸದಸ್ಯ ಪ್ರಭಾಕರ ವಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 40ಜನರಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಪ್ರಭಾಕರ ವಿ. ರವರು ಜಿಲ್ಲಾಧಿಕಾರಿ ಜಿ. ಜಗದೀಶ್, ಕುಂದಾಪುರ ಸರಕಾರಿ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ಡಾ. ರಾಬರ್ಟ್ ರೆಬೆಲ್ಲೋ, ನೋಡಲ್ ಅಧಿಕಾರಿ ಡಾ. ದಿನಕರ ಶೆಟ್ಟಿ ಹಾಗೂ ವೈದ್ಯಾಧಿಕಾರಿಗಳಿಗೆ ಅಂಬೇಡ್ಕರ್ ಕಾಲೋನಿ ನಿವಾಸಿಗಳ ಪರವಾಗಿ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಡಾ. ದಿನಕರ ಶೆಟ್ಟಿ, ಡಾ. ರಶ್ಮಿ ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರು, ಆಶಾಕಾರ್ಯಕರ್ತೆಯರಾದ ಶಶಿಕಲಾ, ವೀಣಾ ಮತ್ತು ಉಡುಪಿ ಪುರಸಭಾ ಸದಸ್ಯ ಪ್ರಭಾಕರ ವಿ ಉಪಸ್ಥಿತರಿದ್ದರು.
Additional image
30 Jun 2021, 03:30 PM
Category: Kaup
Tags: