ಮರ್ಣೆ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ವತಿಯಿಂದ ವಸತಿ ರಹಿತರಿಗೆ ಅಗತ್ಯ ವಸ್ತುಗಳ ವಿತರಣೆ
Thumbnail
ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ವತಿಯಿಂದ ಮಣಿಪುರ ಪಂಚಾಯತ್ ವ್ಯಾಪ್ತಿಯ ಮರ್ಣೆ ಪರಿಸರದ ಸುಮಾರು ಎಂಟು ವಸತಿ ರಹಿತರಿಗೆ ಅಡುಗೆ ಪಾತ್ರೆಗಳ ಕಿಟ್, ಟಾರ್ಪಲ್, ಬಕೇಟ್ ಮತ್ತು ಸೋಪ್ ವಿತರಣೆಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ ತಲ್ಲೂರು ಶಿವರಾಮ ಶೆಟ್ಟಿ ಯವರು ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಕೆ ಜಯರಾಂ ಆಚಾರ್ಯ ಸಾಲಿಗ್ರಾಮ, ಡಿಡಿಆರ್ ಸಿ ಕಾರ್ಯದರ್ಶಿ ಕೆ ಸನ್ಮತ್ ಹೆಗ್ಡೆ, ಮಣಿಪುರ ಪಂಚಾಯತ್ ಸದಸ್ಯರುಗಳಾದ ಪ್ರಜ್ವಲ್ ಹೆಗ್ಡೆ, ವಾಣಿ ಹಾಗೂ ಡಿಡಿಆರ್ ಸಿ ಸಿಬ್ಬಂದಿ ಅನುಷಾ ಉಪಸ್ಥಿತರಿದ್ದರು.
12 Jul 2021, 09:52 AM
Category: Kaup
Tags: