ಉಡುಪಿ : ಅಖಿಲ ಭಾರತ ತುಳುನಾಡ ಧೈವಾರಾಧಕರ ಒಕ್ಕೂಟದಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಗೆ ಮನವಿ
Thumbnail
ಉಡುಪಿ : ಅಖಿಲ ಭಾರತ ತುಳುನಾಡ ಧೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆ ವತಿಯಿಂದ ಮಾಜಿ ಉಸ್ತುವಾರಿ ಸಚಿವರು ಹಾಗೂ ಮಾಜಿ ಶಾಸಕರಾದಂತಹ ಪ್ರಮೋದ್ ಮಧ್ವರಾಜ್ ಅವರಿಗೆ ಅವರ ನಿವಾಸದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ವಿವಿಧ ಬೇಡಿಕೆಗಳ ಮನವಿಯನ್ನು ಕೊಡಲಾಯಿತು. ಎರಡನೇ ಬಾರಿಯ ಕೊರೊನ ತುರ್ತು ಸಂದರ್ಭದಲ್ಲಿ ಹಾಗೂ ಉಡುಪಿ ಮತ್ತು ಮಂಗಳೂರಿನಲ್ಲಿ ದೈವಸ್ಥಾನಗಳಲ್ಲಿ ನಡೆಯುವ ಮಾರಿಪೂಜೆ ದರ್ಶನ ಸೇವೆ ತಂಬಿಲ ಸೇವೆ ಹಾಗೂ ಮುಂತಾದ ಪೂಜಾ ಕಾರ್ಯಕ್ರಮಗಳಿಗೆ ಸರ್ಕಾರದ ಕಟ್ಟುನಿಟ್ಟಾದ 150 ಜನ ಸೀಮಿತಕ್ಕೆ ದೈವಾರಾಧನೆ ನಡೆಸಲು ಸರ್ಕಾರದಿಂದ ಅನುಮತಿ ಬರಲಿಲ್ಲ. ಇದರಿಂದ ದೈವ ಚಾಕ್ರಿ ಯವರು ತುಂಬ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಇದಕ್ಕೆ ಸೂಕ್ತವಾಗಿ ನಿಮ್ಮ ಮುಖಾಂತರ ವಿರೋಧ ಪಕ್ಷದ ವತಿಯಿಂದ ನಮ್ಮ ಸಮಸ್ಯೆಗಳನ್ನು ಮನವರಿಕೆ ಮಾಡಿ ಎಂದು ಮನವಿಯಲ್ಲಿ ಒಕ್ಕೂಟದ ಪರವಾಗಿ ವಿನಂತಿ ಮಾಡಿದರು. ಮನವಿಯನ್ನು ಪಡೆದುಕೊಂಡ ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್ ಮಾತನಾಡಿ ನಿಮ್ಮೆಲ್ಲಾ ಸಮಸ್ಯೆಯನ್ನು ಈ ದಿನ ಮುಖ್ಯಮಂತ್ರಿ ಹಾಗೂ ಇದಕ್ಕೆ ಸಂಬಂಧಪಟ್ಟ ಸಚಿವರೊಂದಿಗೆ ಮಾತಾಡುತ್ತೇನೆ. ನಿಮ್ಮ ಯಾವುದೇ ಸಮಸ್ಯೆಗೆ ನಿಮ್ಮೊಂದಿಗೆ ಬೆಂಬಲವಾಗಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಹಾಗೂ ಬ್ರಹ್ಮವಾರ ಘಟಕದ ಅಧ್ಯಕ್ಷರಾದ ಶ್ರೀಧರ್ ಪೂಜಾರಿ, ಜೊತೆ ಕಾರ್ಯದರ್ಶಿ ದಯೆಶಾ ಕೋಟ್ಯಾನ್, ನವೀನ್ ಕುಂಜಿಬೆಟ್ಟು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
20 Jul 2021, 10:47 AM
Category: Kaup
Tags: