ಬಂಟಕಲ್ಲು ವೇದಮೂರ್ತಿ ವೇದ ವ್ಯಾಸರಾಯ ಭಟ್ ನಿಧನ
ಕಾಪು : ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿರಿಯ ಅರ್ಚಕರಾಗಿದ್ದ ವೇದಮೂರ್ತಿ ವೇದ ವ್ಯಾಸರಾಯ ಭಟ್ (93 ವರ್ಷ) ರವರು ಇಂದು ಬೆಳಗ್ಗಿನ ಜಾವ ವಯೋಸಹಜ ಅನಾರೋಗ್ಯದಿಂದ ನಿಧನರಾದರು.
ಬಂಟಕಲ್ಲು ದೇವಸ್ಥಾನದಲ್ಲಿ ಅರ್ಚಕರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದ ಇವರು ಓರ್ವ ಪುತ್ರ ಹಾಗೂ ಐದು ಮಂದಿ ಪುತ್ರಿಯರನ್ನು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು, ಭಕ್ತವರ್ಗದವರನ್ನು ಅಗಲಿದ್ದಾರೆ.
