ಹೆಜಮಾಡಿ : ಬಿಎಮ್ಎಸ್ ಸ್ಥಾಪನಾ ದಿನಾಚರಣೆ
ಕಾಪು : ಭಾರತೀಯ ಮಜ್ದೂರು ಸಂಘದ ಹೆಜಮಾಡಿ ಶಾಖೆಯ ವತಿಯಿಂದ ಸ್ಥಾಪನಾ ದಿನಾಚರಣೆಯನ್ನು ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಮತ್ತು ಭಾರತೀಯ ಮಜ್ದೂರು ಸಂಘದ ಮಾಜಿ ಉಪಾಧ್ಯಕ್ಷರಾದ ವರದಾ.ಪಿ.ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅವರು ಹೆಜಮಾಡಿ ಗ್ರಾಮದಲ್ಲಿ ಬಿಎಮ್ಎಸ್ ಶಾಖೆ ಹುಟ್ಟಿ ಬೆಳೆದು ಬಂದ ಬಗ್ಗೆ ಮೆಲುಕಿ ಹಾಕಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ ಕಾರ್ಯಕ್ರಮ ಉದ್ದೇಶಿಸಿ ಸಂಘಟನೆಯ ಹುಟ್ಟು, ಕಾರ್ಯಚಟುವಟಿಕೆಗಳನ್ನು ಮತ್ತು ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಕಳೆದ 22 ವರ್ಷಗಳಿಂದ ಬೀಡಿ ಕಾರ್ಮಿಕರ ಕ್ಷೇತ್ರದಲ್ಲಿ ದುಡಿದು ಇದೀಗ ಬೀಡಿ ಕಾರ್ಮಿಕರ ಕ್ಷೇತ್ರದ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ವಿಶಾಲಾಕ್ಷಿ ಸುಧಾಕರ ಕೋಟ್ಯಾನ್ ಅವರನ್ನು ಕಾರ್ಮಿಕರ ಪರವಾಗಿ ಗೌರವಿಸಲಾಯಿತು.
