ಬಂಟಕಲ್ಲು : ಆಟಿಡೊಂಜಿ ದಿನ
Thumbnail
ಕಾಪು : ದೇವಾಡಿಗರ ಸಂಘ 92 ಹೇರೂರು ಬಂಟಕಲ್ಲು ಇವರ ಆಶ್ರಯದಲ್ಲಿ ಹೇರೂರು ದಿನೇಶ್ ದೇವಾಡಿಗರವರ ಮನೆಯ ವಠಾರದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಸಂಘದ ಅಧ್ಯಕ್ಷರಾದ ಶ್ರೀ ಜಯ ಸೇರಿಗಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ದೇವಾಡಿಗರ ಸಂಘದ ಗೌರವಾಧ್ಯಕ್ಷರಾದ ದೇಜು ಸೇರಿಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ದಿನೇಶ್ ದೇವಾಡಿಗರವರು ಆಟಿ ತಿಂಗಳ ಆಚರಣೆಯ ಬಗ್ಗೆ ಮಾಹಿತಿ ನೀಡಿದರು. ಇಂದಿನ ಮಕ್ಕಳಿಗೆ ನಮ್ಮ ಪೂರ್ವಜರಿಗೆ ಆಟಿ ತಿಂಗಳು ಬಲು ಕಷ್ಟದ ತಿಂಗಳಾಗಿತ್ತು. ತಿನ್ನಲು ಸರಿಯಾದ ಅನ್ನ ಇಲ್ಲದೆ ಆಷಾಡ ಮಾಸದಲ್ಲಿ ಸುಲಭವಾಗಿ ಸಿಗುವಂತಹ ಸೊಪ್ಪುಗಳನ್ನು ತಿಂದು ಜೀವನ ನಡೆಸುತ್ತಿದ್ದರು. ಇದೀಗ ಊರಿನ ಸಂಘ-ಸಂಸ್ಥೆಗಳಿಂದ ಹಿಡಿದು ಕಾಲೇಜು ವಿಶ್ವವಿದ್ಯಾನಿಲಯದವರೆಗೆ ವಿವಿಧ ಸಂಘಟನೆಗಳಿಂದ ಆಷಾಡ ಮಾಸದ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಮಹತ್ವವನ್ನು ಸರಿಯಾಗಿ ತಿಳಿಸಿ ಆಷಾಡ ಮಾಸದ ಹಿಂದಿನ ಜನರ ಕಷ್ಟ ದ ದಿನಗಳನ್ನು ನೆನಪಿಸುವ ಕಾರ್ಯ ನಡೆಯುತ್ತಿದೆ. ಹಿಂದಿನ ಕಾಲದ ಆಚರಣೆಗಳನ್ನು ಇಂದಿನ ಮಕ್ಕಳಿಗೆ ತಿಳಿಸುವುದು ಒಳ್ಳೆಯ ಕಾರ್ಯಕ್ರಮವಾಗಿದೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಂಘದ ಸದಸ್ಯರ ಮನೆಯಲ್ಲಿ ತಯಾರಿಸಿದ ಆಷಾಡ ಮಾಸದ ವಿವಿಧ ತಿಂಡಿತಿನಿಸುಗಳನ್ನು ಉಣ ಬಡಿಸಲಾಯಿತು. ಕಾರ್ಯಕ್ರಮದಲ್ಲಿ ಕೂಡುಕಟ್ಟಿನ ಮುಖ್ಯಸ್ಥರಾದ ಶಂಕರ್ ದೇವಾಡಿಗ, ಸಂಘದ ಉಪಾಧ್ಯಕ್ಷರಾದ ಉದಯ ದೇವಾಡಿಗ, ಮಹಿಳಾ ಬಳಗದ ಜ್ಯೋತಿ ದೇವಾಡಿಗ ಉಪಸ್ಥಿತರಿದ್ದರು. ಉದಯ ದೇವಾಡಿಗ ಮತ್ತು ಚರಣ್ ದೇವಾಡಿಗ ಆಟೋಟ ಸ್ಪರ್ಧೆಗಳನ್ನು ನಡೆಸಿದರು. ಶಶಿಕಲಾ ದೇವಾಡಿಗ ಸ್ವಾಗತಿಸಿ, ಅಖಿಲ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಕುಮಾರಿ ಶ್ರೀನಿಧಿ ದೇವಾಡಿಗ ಧನ್ಯವಾದವಿತ್ತರು.
Additional image Additional image Additional image
25 Jul 2021, 09:10 PM
Category: Kaup
Tags: