ಸಹಾಯದ ನಿರೀಕ್ಷೆಯಲ್ಲಿ ಸರಸ್ವತಿ
Thumbnail
ಕಾಪು : ಕುರ್ಕಾಲು ಗ್ರಾಮದ ಕುಂಜಾರುಗಿರಿ ನಿವಾಸಿ ಶಂಕರ್ ಅವರ ಧರ್ಮಪತ್ನಿ ಶ್ರೀಮತಿ ಸರಸ್ವತಿ ಅವರು ಮನೆ ಕೆಲಸ ಮಾಡುತ್ತಿದ್ದು ಅವರಿಗೆ ಸುಮಾರು 25 ವರ್ಷವಾಗಿರುತ್ತದೆ. ಒಂದು ಹೆಣ್ಣು ಮಗುವಿದ್ದು ಸರಸ್ವತಿ ಅವರಿಗೆ 2 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಡಯಾಲಿಸಿಸ್ ಮಾಡಲು ಕಷ್ಟವಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದ್ದು ಜೀವ ಉಳಿಸಿಕೊಳ್ಳಲು ಪತಿಯ ಕಿಡ್ನಿಯನ್ನು ಪತ್ನಿಗೆ ಬದಲಾಯಿಸಲು ನುರಿತ ವೈದ್ಯಾಧಿಕಾರಿಗಳು ಸುಮಾರು 7.50 ಲಕ್ಷ ಖರ್ಚು ವೆಚ್ಚದ ಬಿಲ್ ನೀಡಿದ್ದಾರೆ. ಶಂಕರ್ ಅವರು ನಿತ್ಯ ಕಲ್ಲು ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಅಷ್ಟು ಖರ್ಚು ನಿಭಾಯಿಸಲು ಸಾಧ್ಯವಿಲ್ಲದ ಕಾರಣ ತಾವೆಲ್ಲರೂ ಚಿಕಿತ್ಸೆಗಾಗಿ ಧನಸಹಾಯ ಮಾಡಬೇಕೆಂದು ಈ ಮೂಲಕ ವಿನಂತಿಸಿದ್ದಾರೆ. ಧನ ಸಹಾಯ ಮಾಡುವವರು : ಸ್ಥಳ:ಕು‌ಂಜಾರುಗಿರಿ ಬ್ಯಾಂಕ್ ಖಾತೆ ವಿವರ: NAME:SARASWATHI BANK NAME: CANARA BANK A/C NO:-110002152050 IFSC CODE:-CNRB0010195
01 Aug 2021, 10:02 AM
Category: Kaup
Tags: