ಕಲ್ಯಾಣಪುರ ರೋಟರಿ ಕ್ಲಬ್ ಸದಸ್ಯರ ಕುಟುಂಬ ಸಮ್ಮಿಲನ ಆಟಿದ ಗಮ್ಜಾಲ್ ವಿಶೇಷ ಕಾರ್ಯಕ್ರಮ
Thumbnail
ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ಸದಸ್ಯರ ಕುಟುಂಬ ಸಮ್ಮಿಲನ ಆಟಿದ ಗಮ್ಜಾಲ್ ವಿಶೇಷ ಕಾರ್ಯಕ್ರಮ ಉಡುಪಿಯ ಮೂಡುಬೆಟ್ಟು ಗ್ರೀನ್ ಡೇಲ್ ನಿವೇಶನದಲ್ಲಿ ನಡೆಯಿತು. ಅಧ್ಯಕ್ಷ ಶಂಭು ಶಂಕರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3182 ಇದರ ಮಾಜಿ ಗವರ್ನರ್ ರಾಜಾರಾಂ ಭಟ್, ವಲಯ 11ರ ನಿಕಟಪೂರ್ವ ಸಹಾಯಕ ಗವರ್ನರ್ ಡಾ. ನಂದಕಿಶೋರ್, ವಲಯ 3ರ ನಿಕಟಪೂರ್ವ ಸಹಾಯಕ ಗವರ್ನರ್ ದೇವದಾಸ್ ಶೆಟ್ಟಿಗಾರ್, ಕಾರ್ಯದರ್ಶಿ ಪ್ರಕಾಶ್, ಸ್ಥಳಾವಕಾಶ, ಆಯೋಜನೆಯಲ್ಲಿ ಸಹಕಾರ ನೀಡಿದ ಬ್ಯಾಪ್ಟಿಸ್ಟ್ ಡಯಾಸ್, ಅನಿತಾ ಬ್ಯಾಪ್ಟಿಸ್ಟ್ ಡಯಾಸ್ ಉಪಸ್ಥಿತರಿದ್ದರು. ಆನಂದ ಶೆಟ್ಟಿ ಹಾಗೂ ರೀನಾ ಆನಂದ ಶೆಟ್ಟಿ ಆಟಿಯ ಆಹಾರ, ಆಚರಣೆ, ಸಂಪ್ರದಾಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ವಿಜಯ ಪಾಣಾರ ತಂಡದಿಂದ ಆಟಿಕಳಂಜ, ಪಾರ್ದನಗಳ ಪ್ರಾತ್ಯಕ್ಷಿಕೆ ನಡೆಯಿತು. ರೋ. ಗಿರೀಶ್ ಹಾಗೂ ರೋ. ರಾಮಕೃಷ್ಣ ಆಚಾರ್ ಕಾರ್ಯಕ್ರಮ ‌ನಿರೂಪಿಸಿದರು. ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಸಹಾಯಕ ಗವರ್ನರ್ ಸೇವಾವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ರೋ. ದೇವದಾಸ್ ಶೆಟ್ಟಿಗಾರ್, ಕರಾವಳಿಯ ಪ್ರಸಿದ್ಧ ದೈವಾರಾಧಕ, ನಾಡಿನಾದ್ಯಂತ ಪಾಡ್ದನಗಳ ಮಹತ್ವವನ್ನು ಪ್ರಸಾರ ಮಾಡುತ್ತಿರುವ ವಿಜಯ ಪಾಣಾರ ತೋನ್ಸೆ ಇವರನ್ನು ಸನ್ಮಾನಿಸಲಾಯಿತು. ಇಂದಿಗೂ ಹಸಿರು ಕಾಯಕದಲ್ಲಿ ತೊಡಗಿ, ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ರಾಜಾರಾಂ ಭಟ್, ಅಲೆನ್ ಲೂಯಿಸ್, ಬ್ಯಾಪ್ಟಿಸ್ಟ್ ಡಯಾಸ್, ವಿಜಯ ಮಾಯಾಡಿ, ಸದಾನಂದ ನಾಯಕ್ ಇವರನ್ನು ಗೌರವಿಸಲಾಯಿತು. 40ಕ್ಕೂ ವಿವಿಧ ಬಗೆಯ ಆಟಿ ಖಾದ್ಯಗಳ ಪ್ರದರ್ಶನ ನಡೆಯಿತು. ಕೆಸರು ಗದ್ದೆಯ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
02 Aug 2021, 02:23 PM
Category: Kaup
Tags: