ಕಾಪು : ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ಆಟಿದ ಮರ್ದ್ ಕಷಾಯ ವಿತರಣೆ
Thumbnail
ಕಾಪು : ಕಾಪು ಪೇಟೆಯಲ್ಲಿ ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ಇಂದು ಆಟಿದ ಮರ್ದ್ ಕಷಾಯ ವಿತರಣಾ ಕಾರ್ಯಕ್ರಮಕ್ಕೆ ಬಿರುವೆರ್ ಕಾಪು ಸೇವಾ ಟ್ರಸ್ಟ್ ನ‌ ಅಧ್ಯಕ್ಷ ಬಾಲಕೃಷ್ಣ ಆರ್. ಕೋಟ್ಯಾನ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ತುಳುನಾಡಿನ ಆಚರಣೆಗಳಲ್ಲೊಂದಾಗಿರುವ ಆಟಿದ ಅಮವಾಸ್ಯೆಯಂದು ಕಷಾಯ ಕುಡಿಯುವುದು ವಾಡಿಕೆಯಾಗಿದೆ.‌ ಇಂದಿನ ಆಧುನಿಕ ಯುಗದಲ್ಲಿ ಪೇಟೆ ಭಾಗದ ಜನರು ಆಟಿದ ಕಷಾಯದಿಂದ ವಂಚಿತರಾಗುವಂತಾಗಿದ್ದು ಪ್ರತೀ ಮನೆಗೂ ಕಷಾಯ ತಲುಪಿಸಬೇಕೆಂಬ ಉದ್ದೇಶದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸಾಂಪ್ರದಾಯಿಕ ಶೈಲಿಯಲ್ಲಿ ಸುಮಾರು 50 ಲೀಟರ್ ನಷ್ಟು ಆಟಿದ ಮರ್ದ್ ಹಾಲೆ ಮರದ ಕೆತ್ತೆಯ ಕಷಾಯವನ್ನು ಸಿದ್ಧಪಡಿಸಲಾಗಿದ್ದು, ಕಾಪು ಪೇಟೆಯ ಸುಮಾರು 500ಕ್ಕೂ ಅಧಿಕ ನಾಗರಿಕರು ಪಡೆದುಕೊಂಡರು. ಇಂದು ಮುಂಜಾನೆ ಇನ್ನಂಜೆ, ಮಡುಂಬು, ಕಾಪು ಮೊದಲಾದ ಕಡೆಗಳಲ್ಲಿ ಹಾಲೆ ಮರದ ಕೆತ್ತೆಯನ್ನು ಸಂಗ್ರಹಿಸಲಾಗಿತ್ತು. ಕಾಪು ಪುರಸಭೆಯ ನಿಕಟಪೂರ್ವ ಸದಸ್ಯೆ ಅಶ್ವಿನಿ ನವೀನ್, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ‌ ಪ್ರಧಾನ ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು, ಸದಸ್ಯರಾದ ಪ್ರಶಾಂತ್ ಪೂಜಾರಿ, ಸೃಜನ್‌ ಎಲ್. ಸುವರ್ಣ, ಮನೋಹರ್ ಕಲ್ಲುಗುಡ್ಡೆ, ಅತಿಥ್ ಸುವರ್ಣ ಪಾಲಮೆ, ಜೀವನ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ರೂಪೇಶ್, ದಾಮೋದರ್ ಕಾಪು ಮೊದಲಾದವರು ಉಪಸ್ಥಿತರಿದ್ದರು.
08 Aug 2021, 09:10 AM
Category: Kaup
Tags: