ಮುಂಡ್ಕೂರು : ಕುಲಾಲ ಸಂಘ ನಾನಿಲ್ತಾರ್ ಮಹಿಳಾ ಘಟಕದ ವತಿಯಿಂದ ಆಟಿಡೊಂಜಿ ಕೂಟ
Thumbnail
ಕಾಪು : ಕುಲಾಲ ಸಂಘ ನಾನಿಲ್ತಾರ್ ಮುಂಡ್ಕೂರು ಮಹಿಳಾ ಘಟಕದ ವತಿಯಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವು ನಾನಿಲ್ತಾರ್ ಕುಲಾಲ ಸಂಘದ ಕುಲಾಲ ಭವನದಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಶಶಿ ಕಿಚನ್ ಯೂಟ್ಯೂಬ್ ಚಾನಲ್ ನ ಮುಖ್ಯ ನಿರ್ವಾಹಕಿ ಶಶಿಕಲಾ ವಿಶೇಷ ಅಡುಗೆ ಹಾಗೂ ನಾಟಿ ಮದ್ದಿನ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರತ್ನ ಜಿ. ಮೂಲ್ಯ ವಹಿಸಿದ್ದರು. ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ, ಜಯರಾಮ್ ಕುಲಾಲ್, ದೀಪಕ್ ಬೆಳ್ಮಣ್, ವಾರಿಜಾ, ಮುಡ್ಕೂರು ಗ್ರಾಮ ಪಂಚಾಯತ್ ಸದಸ್ಯರಾದ ಸುಜಾತ, ಸಂತೋಷ್ ಕುಲಾಲ್, ವಿದ್ಯಾನಂದ್, ಸುರೇಶ್ ಮೂಲ್ಯ, ಪ್ರತಿಮಾ ಕುಲಾಲ್, ಚೈತ್ರೆಶ್ ಇನ್ನಾ, ತಾಲೂಕು ಪಂಚಾಯತ್ ಸದಸ್ಯ ಗೋಪಾಲ್ ಮೂಲ್ಯ, ರಾಜೇಶ್ ಕುಲಾಲ್, ಜಗನಾಥ್ ಮೂಲ್ಯ, ರಮಾನಂದ್ ಮೂಲ್ಯ, ಉಪಸ್ಥಿತರಿದ್ದರು. ಆಶಾವರದರಾಜ್ ಸ್ವಾಗತಿಸಿ, ವಂದಿಸಿದರು.
Additional image Additional image Additional image
08 Aug 2021, 10:07 PM
Category: Kaup
Tags: