ಶಿರ್ವ : ಆಟಿ ಅಮಾವಾಸ್ಯೆ ಪ್ರಯುಕ್ತ ಕಷಾಯ, ಮೆಂತೆ ಗಂಜಿ ವಿತರಣೆ
Thumbnail
ಕಾಪು : ಆಷಾಢ ತಿಂಗಳ ಅಮಾವಾಸ್ಯೆಯನ್ನು ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಎಂದು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಇದೇ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಅನಂತ್ರಾಯ ಶೆಣೈ ಮತ್ತು ತಂಡದವರು ಶಿರ್ವ ಪತಂಜಲಿ ಯೋಗ ಸಮಿತಿ ಕಛೇರಿಯಲ್ಲಿ ಸಾರ್ವಜನಿಕರಿಗೆ ಹಾಲೆ ಮರದ ಕಷಾಯ ವಿತರಿಸಿದರು. ಈ ಸಂದರ್ಭ ಕೋವಿಡ್ ನಿಯಮ ಪಾಲಿಸುವುದರೊಂದಿಗೆ ಸರ್ವಧರ್ಮ ಸಮಾಜ ಬಾಂಧವರು ಮುಂಜಾನೆಯಿಂದಲೇ ಕಷಾಯ ಮತ್ತು ಮೆಂತೆ ಗಂಜಿಯನ್ನು ಪಡಕೊಂಡರು.
Additional image
08 Aug 2021, 10:25 PM
Category: Kaup
Tags: