ಬಂಟ್ವಾಳ : ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನೆ
Thumbnail
ಮಂಗಳೂರು : ಬಂಟ್ವಾಳ ತಾಲೂಕಿನ ಅಂಬೇಡ್ಕರ್ ನಗರ ನಾವೂರ ಬಂಟ್ವಾಳದಲ್ಲಿ ಆದಿತ್ಯವಾರ (29/8/21)ದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ.) ಮತ್ತು ಅಂಬೇಡ್ಕರ್ ನಗರ ನಾವೂರ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ಬಲೆ ತುಲು ಲಿಪಿ ಕಲ್ಪುಗ ಕಾರ್ಯಗಾರ ಉದ್ಘಾಟನಾ ಸಮಾರಂಭ ನಡೆಯಿತು. ಅಂಬೇಡ್ಕರ್ ನಗರದ ಹಿರಿಯರಾದ ಜಾನು, ಬೆಲ್ಚಡ, ಅಣ್ಣು (ಯಾನೆ ಅನಿಲ್ ) ತುಲು ಲಿಪಿ ಕಲಿಯುವ ಕಾರ್ಯಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತುಲು ಲಿಪಿ ಶಿಕ್ಷಕರಾದ ಪೂರ್ಣಿಮಾ ಬಂಟ್ವಾಳ ಮತ್ತು ಪೃಥ್ವಿ ತುಲುವೆ ಇವರು ತುಲು ಲಿಪಿ ಬರೆಯುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ನಾವೂರಿನ ಅಂಬೇಡ್ಕರ್ ಭವನದ ಮಾರ್ಗದರ್ಶಕರಾದ ಶಂಕರ್ ಎನ್ ಎಸ್ ನಾವೂರ ಇವರು ತುಲು ಭಾಷೆಯ ಲಿಪಿಯನ್ನು ನಾವೆಲ್ಲರೂ ಕಲಿಯಬೇಕು ಮತ್ತು ತುಲುನಾಡಿನೆಲ್ಲೆಡೆ ಕಲಿಸಬೇಕು ಹಾಗೂ ತುಲು ಭಾಷೆಗೆ ಸುಮಾರು ವರ್ಷದ ಇತಿಹಾಸ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಮಾತೃಭಾಷೆಗೆ ಸ್ಥಾನಮಾನ ಸಿಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನದ ಗೌರವ ಅಧ್ಯಕ್ಷರಾದ ಸದಾನಂದ, ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ದೇಜಪ್ಪ ಉಪಸ್ಥಿತರಿದ್ದರು. ದೀಕ್ಷಾ ಗಣ್ಯರನ್ನು ಸ್ವಾಗತಿಸಿ, ಶ್ರವಣ್ ನಾವೂರ ಎಲ್ಲರಿಗೂ ಧನ್ಯವಾದಗೈದರು. ದೀಕ್ಷಾ ನಾವೂರ ಕಾರ್ಯಕ್ರಮ ನಿರೂಪಿಸಿದರು.
Additional image Additional image
30 Aug 2021, 04:17 PM
Category: Kaup
Tags: