ಯುವತಿಗೆ ಚೂರಿಯಿಂದ ಇರಿದು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ
Thumbnail
ಉಡುಪಿ :ಉಡುಪಿಯ ಸಂತೆಕಟ್ಟೆ ಆಶೀರ್ವಾದ್ ಚಿತ್ರಮಂದಿರದ ಬಳಿ ಜೋಡಿಯೊಂದು ಪರಸ್ಪರ ವಾಗ್ವಾದಕ್ಕಿಳಿದು ಯುವಕನು ಯುವತಿಗೆ ಚೂರಿಯಿಂದ ಇರಿದು ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಇಬ್ಬರೂ ಬೇರೆ ಬೇರೆ ವಾಹನದಲ್ಲಿ ಆಗಮಿಸಿದ್ದು, ಇರ್ವರಲ್ಲಿ ವಾಗ್ವಾದ ಬೆಳೆದು ಈ ಘಟನೆ ಸಂಭವಿಸಿದೆ. ಇದೊಂದು ಏಕಮುಖ ಪ್ರೀತಿಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಸ್ಥಳೀಯರು ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಘಟನಾ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿದ್ದಾರೆ.
30 Aug 2021, 06:50 PM
Category: Kaup
Tags: