ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ನೇ ಸ್ಥಾನದಲ್ಲಿ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ
Thumbnail
ಉಡುಪಿ : ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಇಲ್ಲಿನ ವಿದ್ಯಾರ್ಥಿಗಳಾದ ಸಾತ್ವಿಕ್ ಪಿ ಭಟ್ 625 ರಲ್ಲಿ 625 ಮತ್ತು ಜೆರೊಹ್ಯಾಮ್ ಲೋಯ್ಡ್ ಮಾಬೆನ್ 625 ರಲ್ಲಿ 623 ದಾಖಲೆಯ ಅಂಕ ತೆಗೆದಿರುತ್ತಾರೆ. ಪರೀಕ್ಷೆಗೆ ಹಾಜರಾದ 100 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಉಳಿದ ಮಕ್ಕಳು 60% ಕಿಂತ ಹೆಚ್ಚು ಅಂಕ ತೆಗೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಫಲಿತಾಂಶದಲ್ಲಿ ಶಾಲೆಯು ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ನೇ ಸ್ಥಾನದಲ್ಲಿರುವುದು ಶಾಲೆಯ ಈ ಸಾಲಿನ ಸಾಧನೆಯಾಗಿರುತ್ತದೆ. ಈ ಸಾಧನೆಗಾಗಿ ಎಲ್ಲಾ ವಿದ್ಯಾರ್ಥಿಗಳಿಗೂ, ಇದಕ್ಕೆ ತುಂಬಾ ಶ್ರಮವಹಿಸಿದ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕಿ, ಶಿಕ್ಷಕ - ಶಿಕ್ಷಕಿಯರು ಹಾಗೂ ಶಿಕ್ಷಕೇತರ ವೃಂದದವರು ಹಾಗೂ ಮಕ್ಕಳ ಪೋಷಕರಿಗೆ ಶಾಲಾಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
01 Sep 2021, 01:27 PM
Category: Kaup
Tags: