ಶಿರ್ವ : ಗ್ರಾಮ ಪಂಚಾಯತ್, ಎಸ್.ವೈ.ಎಸ್, ಎಸ್.ಎಸ್.ಎಫ್ ತಂಡದಿಂದ ಶಾಲೆಗಳ ಸ್ಯಾನಿಟೈಝೇಶನ್
Thumbnail
ಕಾಪು : ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಪ್ರಾಥಮಿಕ ಶಾಲೆಗಳ ಮಕ್ಕಳ ಭೌತಿಕ ತರಗತಿಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ಪ್ರಾಥಮಿಕ ಶಾಲೆಗಳು ಹಾಗೂ ಎರಡು ಪ.ಪೂರ್ವ ಕಾಲೇಜುಗಳನ್ನು ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ತೋಪನಂಗಡಿ ಎಸ್.ವೈ.ಎಸ್ ಮತ್ತು ಎಸ್.ಎಸ್.ಎಫ್ ತಂಡದ ಸಹಕಾರದಿಂದ ಸ್ಯಾನಿಟೈಝೇಶನ್ ಮಾಡಿಸಲಾಯಿತು. ಶಿರ್ವ ಗ್ರಾ.ಪಂ ಅಧ್ಯಕ್ಷ ಕೆ. ಆರ್. ಪಾಟ್ಕರ್, ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭ ನಾಯಕ್ , ಹಿಂದು ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ, ಸಹಾಯ್ ತಂಡದ ಸದಸ್ಯರು, ಶಿಕ್ಷಕಿಯರು ಉಪಸ್ಥಿತರಿದ್ದರು.
Additional image
04 Sep 2021, 05:53 PM
Category: Kaup
Tags: