ಲಯನ್ಸ್ ಕ್ಲಬ್ ಉಡುಪಿ ಕರಾವಳಿಯಿಂದ ಪತ್ರಿಕಾ ವಿತರಕರ ದಿನಾಚರಣೆ
Thumbnail
ಉಡುಪಿ : ಲಯನ್ಸ್ ಕ್ಲಬ್ ಉಡುಪಿ ಕರಾವಳಿ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಲಾಯಿತು. ಬಂಟಕಲ್ಲು ಪರಿಸರದಲ್ಲಿ ಸುಮಾರು 20 ವರ್ಷಗಳಿಂದ ಪತ್ರಿಕೆ ವಿತರಕರಾಗಿರುವ ಕೆ. ಆರ್. ಪಾಟ್ಕರ್ ರವರನ್ನು ಅವರ ಮನೆಯಲ್ಲಿ ಲಯನ್ಸ್ ಉಡುಪಿ ಕರಾವಳಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ರಮಾನಂದ ಶೆಟ್ಟಿಗಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕಾ ದಿನಾಚರಣೆಯ ಮಹತ್ವ ಬಗ್ಗೆ ತಿಳಿಸಿ ಕೆ.ಆರ್. ಪಾಟ್ಕರ್ ರವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ. ಆರ್. ಪಾಟ್ಕರ್ ರವರು ಸನ್ಮಾನಕ್ಕೆ ಕೃತಜ್ಞತೆ ತಿಳಿಸಿ ಪತ್ರಿಕಾ ವಿತರಣೆ ವೃತ್ತಿಯನ್ನು ತಾನು ಗೌರವಿಸಿ, ಈ ವೃತ್ತಿಯನ್ನು ತುಂಬಾ ಪ್ರೀತಿಸುವುದು ಮಾತ್ರವಲ್ಲದೆ ಈ ಬಗ್ಗೆ ಹೆಮ್ಮೆ ಪಡುವುದಾಗಿ ತಿಳಿಸಿದರು. ತನಗಿಂದು ದೊರೆತಿರುವ ಸ್ಥಾನ ಮಾನಗಳಿಗೆ ಈ ವೃತ್ತಿಯೇ ಕಾರಣ ಎಂದರು. ನಿಕಟಪೂರ್ವ ಅಧ್ಯಕ್ಷ ಅನಂತರಾಮ ವಾಗ್ಲೆ, ರತ್ನಾಕರ ಕಾಮತ್, ಗ್ರಾ.ಪಂ ಸದಸ್ಯೆ ವೈಲೇಟ್ ಕಸ್ತಲಿನೋ, ಅನಿತಾ ಮೆಂಡೋನ್ಸಾ, ಸಂಗೀತಾ ಪಾಟ್ಕರ್, ರಚಿತಾ ಪಾಟ್ಕರ್ ಉಪಸ್ಥಿತರಿದ್ದರು. ಅಧ್ಯಕ್ಷ ರವೀಂದ್ರ ಆಚಾರ್ಯರವರು ಸ್ವಾಗತಿಸಿ, ಕಾರ್ಯದರ್ಶಿ ರಾಘವೇಂದ್ರ ನಾಯಕ್ ವಂದಿಸಿದರು.
04 Sep 2021, 11:11 PM
Category: Kaup
Tags: