ಸರಕಾರಿ ಪ್ರೌಢ ಶಾಲೆ ಫಿಶರೀಸ್ ಮಲ್ಪೆಯ ನಿವೃತ್ತ ಶಿಕ್ಷಕರಿಗೆ ಗುರುವಂದನೆ
Thumbnail
ಉಡುಪಿ : ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮಲ್ಪೆ ಹಾಗೂ 1986-87 ನೇ ವರ್ಷದ ಹತ್ತನೇ ತರಗತಿಯ ಹಳೆ ವಿದ್ಯಾರ್ಥಿ ಗಳಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಮಗೆ ವಿದ್ಯೆ ನೀಡಿದ ಗುರುಗಳಿಗೆ ಗೌರವ ಅರ್ಪಣೆಯು ಶ್ರೀಮತಿ ಶಾಂತಿ ಟಿ. ಹೆಗಡೆ ನಿವೃತ್ತ ವೃತ್ತಿ ಶಿಕ್ಷಕರು ಮತ್ತು ಶ್ರೀಮತಿ ಧೋರತಿ ಕೋಟ್ಯಾನ್ ನಿವೃತ್ತ ದೈಹಿಕ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಫಿಶರೀಸ್ ಮಲ್ಪೆ ಇವರಿಗೆ ಅವರ ಸ್ವಗೃಹದಲ್ಲಿ ಗುರುವಂದನೆಯನ್ನು ಅರ್ಪಿಸಲಾಯಿತು. ಈ ಕಾರ್ಯಕ್ರಮವು ಸತತ 13 ವರ್ಷ ಗಳಿಂದ ನಡೆದು ಬರುತ್ತಾ ಇರುವುದು ವಿಶೇಷವಾಗಿದೆ. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಹಾಗೂ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ ಎಮ್. ಮಹೇಶ್ ಕುಮಾರ್, ಹಳೆ ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳಾದ ಚಿತ್ರ ಕುಮಾರ್, ಲಕ್ಷ್ಮೀಶ ಬಂಗೇರ, ವಿನಯ ಪಡುಕರೆ, ಶಿವರಾಮ್ ಟಿ. ಸುವರ್ಣ, ರೋಹಿಣಿ, ಇಂದಿರಾ, ವಾಣಿ, ಮೀನಾ ನಾಯರ್, ಸರೋಜಿನಿ ಉಪಸ್ಥಿತರಿದ್ದರು.
Additional image
05 Sep 2021, 08:15 PM
Category: Kaup
Tags: