ಮಣಿಪುರ : ಮೋಕ್ಷಗಿರಿ ಧಾರ್ಮಿಕ ಕ್ಷೇತ್ರದಲ್ಲಿ ಸ್ಮಶಾನ ಮತ್ತು ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ವಿಎಚ್ ಪಿ ಮತ್ತು ಬಜರಂಗದಳ ವಿರೋಧ
Thumbnail
ಕಟಪಾಡಿ : ಮಣಿಪುರ ಪಂಚಾಯತ್ ಸಾರ್ವಜನಿಕರ ವಿರೋಧ ಇದ್ದರೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಕುಂತಳನಗರದ ಮೋಕ್ಷಗಿರಿಯಲ್ಲಿ ಸ್ಮಶಾನ ಮತ್ತು ಎಸ್ ಎಲ್ ಆರ್ ಎಮ್ ಘಟಕ ಮಾಡಲು ಹೊರಟಿದ್ದು ಅಲ್ಲಿದ್ದ ಧಾರ್ಮಿಕ ಕಾರ್ಯಕ್ರಮಗಳ ಕುರುಹು ಆಗಿದ್ದ ಸಭಾ ವೇದಿಕೆ ಧ್ವಂಸಗೊಳಿಸಿದ್ದು ಖಂಡನೀಯವೆಂದು ವಿಶ್ವಹಿಂದು‌ಪರಿಷತ್ ಬಜರಂಗಳ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂದು ಸ್ಥಳಕ್ಕೆ ಭೇಟಿ‌ ನೀಡಿದ ಬಜರಂಗದಳ ರಾಜ್ಯ ಸಂಚಾಲಕರಾದ ಸುನಿಲ್ ಕೆ ಆರ್, ಜಿಲ್ಲಾ ಸಂಚಾಲಕರಾದ ದಿನೇಶ್ ಮೆಂಡನ್, ಜಿಲ್ಲಾ ವಿಶ್ವಹಿಂದು ಪರಿಷತ್ ಅಧ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ, ಸುಧೀರ್ ನಿಟ್ಟೆ ಪಂಚಾಯತ್ ಅಧ್ಯಕ್ಷರು ಕೂಡಲೇ ತಪ್ಪನ್ನು ತಿದ್ದಿಕೊಂಡು ಹಿಂದುಗಳ ಭಾವನೆಗೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಿ ಈ ಯೋಜನೆ ರದ್ದುಪಡಿಸಿ ಹಾಳು ಮಾಡಿದ ವೇದಿಕೆ ಸರಿಪಡಿಸಿ ನೀಡಬೇಕು ಎಂದರು. ಪ್ರಮುಖರಾದ ಶ್ರೀಕಾಂತ ನಾಯಕ್ ಅಲೆವೂರು, ಸಂತೋಷ್ ಮೂಡುಬೆಳ್ಳೆ, ಸತೀಶ್ ಶೆಟ್ಟಿ, ಪ್ರಭಾಕರ ದೇವಾಡಿಗ, ವಿಠ್ಠಲ ಪೂಜಾರಿ, ಕಾರ್ತಿಕ್ ಶೆಟ್ಟಿ, ಮಣಿಪುರ ಪಂಚಾಯತ್ ಸದಸ್ಯರಾದ ಪ್ರಜ್ವಲ್ ಹೆಗ್ಡೆ, ಸಂತೋಷ್ ಶೆಟ್ಟಿ, ಜೀವನ್, ನಾಗೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪುಲಿಂದ ಮಹರ್ಷಿಗಳ ತಪೋಭೂಮಿಯನ್ನು ಹಿಂದೂ ಸಮಾಜ ಉಳಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು. ಇಲ್ಲಿರುವ ಗುಹೆಗಳು, ಹಿಂದೆ ಅಷ್ಟಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರು. ಕಾಮಗಾರಿ ನಿಲ್ಲಿಸಿ ಧ್ವಂಸಗೊಳಿಸಿದ ಸಭಾವೇದಿಕೆ ನಿರ್ಮಿಸಿ ಕೊಡದಿದ್ದರೆ ಹೋರಾಟ ನಡೆಸವ ಬಗ್ಗೆ ಚರ್ಚಿಸಲಾಯಿತು.
Additional image Additional image Additional image
08 Sep 2021, 10:59 PM
Category: Kaup
Tags: