ಉಡುಪಿ ಹೆಲ್ಪ್ ಲೈನ್ 4 ನೇ ವಷ೯ದ ಸಂಭ್ರಮದ ಅಂಗವಾಗಿ ಕೃಷ್ಣಾನುಗ್ರಹ ಅನಾಥಾಶ್ರಮದಲ್ಲಿ ಮಕ್ಕಳಿಗೆ ಊಟ, ಉಪಾಹಾರ ಮತ್ತು ಕಿಟ್ ವಿತರಣೆ
Thumbnail
ಉಡುಪಿ : ಹಸಿದವರ ಬಾಳಿನ ಆಶಾಕಿರಣವಾದ ಉಡುಪಿ ಹೆಲ್ಪ್ ಲೈನ್ (ರಿ.)ನ 4ನೇಯ ವಷ೯ದ ಸಂಭ್ರಮದ ಅಂಗವಾಗಿ ಅನಾಥ ಮಕ್ಕಳ ಬಾಳಿನ ಆಶಾಕಿರಣವಾದ ಉಡುಪಿ ಯ ಸಂತೆಕಟ್ಟೆಯ ಕೃಷ್ಣಾನುಗ್ರಹ ಅನಾಥಾಶ್ರಮದಲ್ಲಿ ಮಕ್ಕಳಿಗೆ ಊಟ, ಚಹಾ-ತಿಂಡಿ, ಸಿಹಿತಿಂಡಿ, ಬಿಸ್ಕತ್, ಹಣ್ಣುಹಂಪಲು ನೀಡಿ ಮಕ್ಕಳ ಜೊತೆ ಆಚರಿಸಲಾಯಿತು. ಇದೇ ಸಂದರ್ಭ ಕೆ.ಜಿ ರೋಡ್ ಸಮೀಪ ದಿ ಸುಬ್ರಮಣ್ಯ ಆಚಾರ್ಯ ಅವರ ತಾಯಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡಲಾಯಿತು. ಈ ಸಂಧಭ೯ದಲ್ಲಿ ಸಮಾಜ ಸೇವಕ ಮಂಜುನಾಥ್ ಶೆಟ್ಟಿ ಮಣಿಪಾಲ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿಯ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್ ಅಡ್ಯಾರ್,ಆಕಾಶವಾಣಿ ಕಲಾವಿದೆ ಭಾರತಿ ಟಿ. ಕೆ, ಸಾಮಾಜಿಕ ಕಾಯ೯ಕತೆ೯ ಪ್ರೀತಿ ಕಲ್ಯಾಣಪುರ, ಸಮಾಜ ಸೇವಕಿ ಉಷಾ ಹೂಡೆ, ತೋನ್ಸೆ ಗ್ರಾಮ ಪಂಚಾಯತ್ ಸದಸ್ಯರಾದ ಕುಸುಮ ಗುಜ್ಜರುಬೆಟ್ಟು, ಯಶೋಧ ಕೆಮ್ಮಣ್ಣು, ವತ್ಸಲಾ ವಿನೋದ್ ಗುಜ್ಜರುಬೆಟ್ಟು, ಆಶಾ ಕೆಮ್ಮಣ್ಣು, ಉಡುಪಿ ಹೆಲ್ಪ್ ಲೈನ್ (ರಿ.) ಸಂಸ್ಥೆಯ ಪದಾಧಿಕಾರಿಗಳಾದ ಸುಧಾಕರ್ ಕಾಡೂರು,ನಿತಿನ್ ಆಚಾಯ೯ ಕಾಡೂರು, ರಪೀಕ್ ಕಲ್ಯಾಣಪುರ, ಮಹೇಶ್ ಪೂಜಾರಿ ಹೂಡೆ ಉಪಸ್ಥಿತರಿದರು.
Additional image
09 Sep 2021, 01:42 PM
Category: Kaup
Tags: