ಸೈಬರಕಟ್ಟೆ : ಇಂಜಿನಿಯರ್ಸ್ ಡೇ ಪ್ರಯುಕ್ತ ಹಿರಿಯ ನಿವೃತ್ತ ಇಂಜಿನಿಯರ್ ಕೆ. ವಿಜಯ ಹೆಗ್ಡೆ ಸಣ್ಗಲ್ ರಿಗೆ ಸನ್ಮಾನ
Thumbnail
ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಇಂಜಿನಿಯರ್ಸ್ ಡೇ ಪ್ರಯುಕ್ತ ಹಿರಿಯ ನಿವೃತ್ತ ಇಂಜಿನಿಯರ್ ಕೆ. ವಿಜಯ ಹೆಗ್ಡೆ ಸಣ್ಗಲ್ ಅವರನ್ನು ಆದರಣೀಯ ಗೌರವಗಳೊಂದಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ರೋಟರಿ ಸಂಸ್ಥೆ ಹಾಗೂ ಸೈಬರಕಟ್ಟೆ ರೋಟರಿ ಮಾಡುತ್ತಿರುವ ಸೇವಾ ಯೋಜನೆಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಲ್ಲದೆ ಮುಂದೆ ಕೂಡ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಿ ಅಂತ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಲಯ 3 ರ ಸೇನಾನಿ ವಿಜಯಕುಮಾರ್ ಶೆಟ್ಟಿ, ರೋಟರಿ ಅಧ್ಯಕ್ಷ ಯು ಪ್ರಸಾದ್ ಭಟ್ ,ನಿಕಟ ಪೂರ್ವ ಅಧ್ಯಕ್ಷ ಹರೀಶ್ ಕಂದಾವರ ಕಾರ್ಯದರ್ಶಿ ಅಣ್ಣಯ್ಯ ದಾಸ್, ಸಂಕಯ್ಯ ಶೆಟ್ಟಿ, ಗಣೇಶ್ ನಾಯಕ್, ಕಿರಣ್, ರಾಜು, ರಾಮಪ್ರಕಾಶ್ ಉಪಸ್ಥಿತರಿದ್ದರು.
15 Sep 2021, 10:57 PM
Category: Kaup
Tags: