ಪಡುಬಿದ್ರಿ : ರೋಟರಿ ಕ್ಲಬ್ ವತಿಯಿಂದ ಸಾಕ್ಷರತಾ ದಿನಾಚರಣೆ
ಪಡುಬಿದ್ರಿ : ನಮ್ಮ ದೇಶವು ಶೇಕಾಡ 69 ರಷ್ಟು ಸಾಕ್ಷರತೆ ಹೊಂದಿದ್ದು , ದೇಶದ ಪ್ರತಿಯೊಬ್ಬ ಪ್ರಜೆ ಸಾಕ್ಷರತೆ ಹೊಂದಿದ್ದಲ್ಲಿ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಸರಕಾರ ಇನ್ನಷ್ಟು ಸಾಕ್ಷರತೆಯ ಬಗ್ಗೆ ಜಾೃಗತಿ ಹಾಗು ಪ್ರೇರೇಪಿಸುವತಂಹ ಕಾರ್ಯಕ್ರಮ ಗಳನ್ನು ಹಮ್ಮಿಕೂಳ್ಳಬೇಕಾದ ಅಗತ್ಯ ವಿದೆ ಎಂದು ಅದಮಾರು ಪೂರ್ಣಪ್ರಜ್ಞಾ ಶಾಲಾ ಶಿಕ್ಷಕಿ ಯಶೋಧ ಪಡುಬಿದ್ರಿಯವರು ಹೇಳಿದರು.
ಅವರು ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ರೋಟರಿ ಕಚೇರಿಯಲ್ಲಿ ನಡೆದ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಹೆಜಮಾಡಿ ಗ್ರಾಮದ ಒಬ್ಬ ವಿದ್ಯಾರ್ಥಿಯನ್ನು ರೋಟರಿ ವತಿಯಿಂದ ದತ್ತು ಸ್ವೀಕರಿಸಲಾಯಿತು.
ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ವಲಯ ಸಂಯೋಜಕ ರಮೀಜ್ ಹುಸೇನ್ , ಕಾರ್ಯದರ್ಶಿ ಬಿ.ಯಸ್. ಆಚಾರ್ಯ, ಕಾರ್ಯಕ್ರಮ ನಿರ್ದೇಶಕ ಸುಧಾಕರ್ ಕೆ. ಉಪಸ್ಥಿತರಿದ್ದರು.
ಮಹಮ್ಮದ್ ನಿಯಾಜ್ ಸ್ವಾಗತಿಸಿ, ಸುಧಾಕರ್ ಕೆ. ನಿರೂಪಿಸಿ, ಬಿ.ಯಸ್. ಆಚಾರ್ಯ ವಂದಿಸಿದರು.
