ಅಕ್ಟೋಬರ್ 9 : ವಿಶ್ವ ನ್ಯೂಸ್ 24 ಇದರ ನೂತನ ಕಚೇರಿ ಹಾಗೂ ಸ್ಟುಡಿಯೋ ಉದ್ಘಾಟನೆ
Thumbnail
ಕಾಪು : ಮಮಂತ್ರ ಮೀಡಿಯಾ ನೆಟ್ವಕ್೯ ಗ್ರೂಪ್ ಆಫ್ ಕಂಪನಿಯ ನಾಲ್ಕನೇ ವರ್ಷದ ಸಂಭ್ರಮದಲ್ಲಿರುವ ವಿಶ್ವ ನ್ಯೂಸ್ 24 ಇದರ ನೂತನ ಕಚೇರಿ ಹಾಗೂ ಸ್ಟುಡಿಯೋ ಉದ್ಘಾಟನೆಯು ಅಕ್ಟೋಬರ್ 9, ಶನಿವಾರ ಬೆಳಿಗ್ಗೆ 10:15 ಕ್ಕೆ ಸರಿಯಾಗಿ ಕಾಪುವಿನ ಜನಾರ್ಧನ ಕಾಂಪ್ಲೆಕ್ಸ್ ನ ನಾಲ್ಕನೇ ಮಹಡಿಯಲ್ಲಿ ಜರಗಲಿದೆ. ನೂತನ ಕಚೇರಿ ಹಾಗೂ ಸ್ಟುಡಿಯೋ ಇದರ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾಡಲಿದ್ದು, ನೂತನ ಆ್ಯಪ್ ನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷರಾದ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಬಿಡುಗಡೆ ಮಾಡಲಿದ್ದಾರೆ ಎಂದು ಮಮಂತ್ರ ಮೀಡಿಯಾ ನೆಟ್ವಕ್೯ ಗ್ರೂಪ್ ಆಫ್ ಕಂಪನಿಯ ಪ್ರವರ್ತಕ ಪುರುಷೋತ್ತಮ್ ಸಾಲ್ಯಾನ್ ಮೂಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Additional image
02 Oct 2021, 11:05 PM
Category: Kaup
Tags: