ಉಡುಪಿ : ಡಿಜಿಟಲ್ ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆ
Thumbnail
ಉಡುಪಿ : ಗ್ಯಾಲಾಕ್ಸಿ ಇಮೇಜಿಂಗ್ ಟೆಕ್ನಾಲಜಿ ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ.) ಉಡುಪಿ ಜಂಟಿ ಸಹಯೋಗದಲ್ಲಿ Konico Minolta Digital Mechine Print Expo 2021 ಡಿಜಿಟಲ್ ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆಯು ಆದಿಉಡುಪಿ ತಾರಾಸ್ ಪ್ರಿಂಟ್ ಕಾರ್ನರ್ ಬೈದಶ್ರೀ ಬಿಲ್ಡಿಂಗ್ ಪ್ರಥಮ ಮಹಡಿಯಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಮಾಜಿ ಅಧ್ಯಕ್ಷರು ಹಾಗೂ ಲಯನ್ಸ್ ಜಿಲ್ಲಾ ಗವರ್ನರ್ ಎಚ್ ವಿಶ್ವನಾಥ್ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ದಯಾನಂದ ಬಂಗೇರ ಕಟಪಾಡಿ, ಗ್ಯಾಲಾಕ್ಷಿ ಇಮ್ಯಾಜಿಂಗ್ ಟೆಕ್ನಾಲಜಿಯ ಎನ್. ಮೋಹನ್, ಸಂಘಟನೆಯ ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಗೌರವ ಸಲಹೆಗಾರ ಅಶೋಕ್ ಶೆಟ್ಟಿ, ಕಾರ್ಯದರ್ಶಿ ಮನೋಜ್ ಕಡಬ, ಕೋಶಾಧಿಕಾರಿ ಸುಧೀರ್ ಡಿ. ಬಂಗೇರ, ಸದಸ್ಯರಾದ ರಮೇಶ್ ಕುಂದರ್, ಮಾಜಿ ಅಧ್ಯಕ್ಷರಾದ ರಮೇಶ್ ತಿಂಗಳಾಯ, ಸದಸ್ಯರಾದ ಶೇಖರ್ ಜತ್ತನ್, ಸರ್ವಿಸ್ ಇಂಜಿನಿಯರ್ ಗಳಾದ ಉಲ್ಲಾಸ್, ನಾಗೇಂದ್ರ ಉಪಸ್ಥಿತರಿದ್ದರು. ಸುಮಾರು 50 ಜನ ಪ್ರೆಸ್ ಮಾಲಕರು ಆಗಮಿಸಿ ವೀಕ್ಷಿಸಿದರು. ಈ ಸಂದರ್ಭ ಒಟ್ಟು 12 ಡಿಜಿಟಲ್ ಯಂತ್ರ ಬುಕ್ ಆಯಿತು. ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಕುಂದರ್ ರವರು ನೆರವೇರಿಸಿದರು. ಕಾರ್ಯದರ್ಶಿ ಮನೋಜ್ ಕಡಬ ವಂದಿಸಿದರು.
09 Oct 2021, 10:15 PM
Category: Kaup
Tags: