ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ವಿಜಯ ಬಾಲನಿಕೇತನ ವಿದ್ಯಾರ್ಥಿ ನಿಲಯದಲ್ಲಿ ಉಚಿತ ಆರೋಗ್ಯ ತಪಾಸಣೆ
Thumbnail
ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಆದಿತ್ಯವಾರ ಬ್ರಹ್ಮಾವರ ಮಟಪಾಡಿಯ ವಿಜಯ ಬಾಲನಿಕೇತನ (ಆರ್ಥಿಕ ಅಶಕ್ತ ಬಾಲಕರ ಉಚಿತ ವಿದ್ಯಾರ್ಥಿ ನಿಲಯ) ಕ್ಕೆ ಭೇಟಿ ನೀಡಿ ಉಚಿತ ಆರೋಗ್ಯ ತಪಾಸಣೆ ನಡೆಸಿ ಅಲ್ಲಿನ ವಿದ್ಯಾರ್ಥಿಗಳಿಗೆ ರಾತ್ರಿ ಊಟದ ವ್ಯವಸ್ಥೆ ಮಾಡಲಾಯಿತು. ತಂಡದ ಸದಸ್ಯರು ಅಲ್ಲಿನ ವಿದ್ಯಾರ್ಥಿಗಳೊಂದಿಗೆ ವಾಲಿಬಾಲ್ ಆಟವನ್ನಾಡಿದರು. ಈ ಕಾರ್ಯಕ್ರಮವನ್ನು ಆಸರೆ ತಂಡದ ಸಂಸ್ಥಾಪಕಧ್ಯಕ್ಷರು ಆದ ಡಾ. ಕೀರ್ತಿ ಪಾಲನ್ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಶ್ರೀಕಾಂತ್ ಅಮಿನ್, ಕೋಶಾಧಿಕಾರಿ ಜಗದೀಶ್ ಬಂಟಕಲ್, ಸದಸ್ಯರಾದ ಬೇಬಿ ಶೆಟ್ಟಿ, ಡಾ. ಸಂಗೀತ, ಸುಕೇತ್ ಕುಲಾಲ್, ಮೋಕ್ಷ ಪಾಲನ್, ಶ್ಲೋಕ ಪಾಲನ್, ಶ್ರೇಯಸ್ ಹಾಗೂ ಸೌಂದರ್ಯ ಟೀಚರ್ ಉಪಸ್ಥಿತರಿದ್ದರು.
18 Oct 2021, 08:54 AM
Category: Kaup
Tags: