ಗ್ರಾಮೀಣ ಪ್ರದೇಶದ 18 ರಿಂದ 45 ರ ವಯೋಮಿತಿಯ ಯುವಕ ಯುವತಿಯರಿಗೆ ಉಚಿತ ಸ್ವ ಉದ್ಯೋಗ ತರಬೇತಿ ಶಿಬಿರ
ಉಡುಪಿ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಮಣಿಪಾಲ- ಕೆನರಾ ಬ್ಯಾಂಕ್ ಆರ್ ಸೆಟಿ (ಸಿಂಡ್ಆರ್ ಸೆಟಿ) ಇವರ ವತಿಯಿಂದ ಉಚಿತ ಸ್ವ ಉದ್ಯೋಗ ತರಬೇತಿಯು
ದಿನಾಂಕ 18ರಿಂದ 17ರ ವರೆಗೆ 30 ದಿನಗಳ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ನಡೆಯಲಿದೆ.
ತರಬೇತಿಯಲ್ಲಿ ಪ್ರಾಯೋಗಿಕ ಕೌಶಲ್ಯದ ಜೊತೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ನೀಡಲಾಗುವುದು. ತರಬೇತಿಯ ನಂತರ ಸ್ವ ಉದ್ಯೋಗ ಪ್ರಾರಂಭಿಸಲು ಮಾರ್ಗದರ್ಶನ, ಸಹಕಾರ ನೀಡಲಾಗುವುದು. ಸ್ವ ಉದ್ಯೋಗ ಪ್ರಾರಂಭಿಸಲು ಸಾಲ ಸೌಲಭ್ಯದ ಅವಶ್ಯಕತೆ ಇದ್ದಲ್ಲಿ ಬ್ಯಾಂಕ್ ಲಿಂಕೇಜ್ ಮಾಡಿ ಕೊಡಲಾಗುವುದು
ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತ ತರಬೇತಿ ನೀಡಲಿದ್ದು, ಆಸಕ್ತರು ಕೂಡಲೇ ಕರೆ ಮಾಡಿ ಅಥವಾ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಸ ಬಹುದಾಗಿದೆ.
ಗ್ರಾಮೀಣ ಪ್ರದೇಶದ 18 ರಿಂದ 45 ರ ವಯೋಮಿತಿಯ ಯುವಕ ಯುವತಿಯರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಬಿ.ಪಿ.ಎಲ್ ಕುಟುಂಬದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಒಬ್ಬರಿಗೆ ಯಾವುದಾದರು ಒಂದು ತರಬೇತಿಯನ್ನು ಪಡೆಯಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 0820- 2570455, 9449862665, 8197694156
ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ
https://docs.google.com/forms/d/e/1FAIpQLSfdoGNiTcI4sZP2IbLJ1fsw_iTTmyj8nY4pcNTt5iYyrezhDQ/viewform
