ಕಾಪು ಪೋಲಿಸ್ ಠಾಣೆಯ ಆಯುಧ ಪೂಜೆಯಲ್ಲೂ ಕೋಮುಭಾವನೆ ಕಂಡದ್ದು ಸಿದ್ಧರಾಮಯ್ಯಗೆ ಮಾತ್ರ : ಲಾಲಾಜಿ‌ ಆರ್. ಮೆಂಡನ್
Thumbnail
ಕಾಪು : ಇಲ್ಲಿನ ಪೊಲೀಸ್ ಆಯುಧ ಪೂಜೆ ದಿನ ಒಂದೇ ರೀತಿಯ ವಸ್ತ್ರ ಧರಿಸಿದ್ದರಲ್ಲಿ ಕೋಮುಭಾವನೆ ಕಂಡದ್ದು ಸಿದ್ಧರಾಮಯ್ಯಗೆ ಮಾತ್ರ. ಸಮಾಜದಲ್ಲಿ ಎರಡು ಪಂಗಡಗಳನ್ನು ಎತ್ತಿಕಟ್ಟುವುದರಲ್ಲಿ ಒಡೆದು ಆಳುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಮರು, ಈ ಕಾಂಗ್ರೆಸ್ ಸಂಸ್ಕೃತಿಯಿಂದಾಗಿ ದ್ವಂದ್ವ ನೀತಿಯಿಂದ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಯಲ್ಲಿದೆ. ಕರ್ನಾಟಕ ಜಂಗಲ್ ರಾಜ್ಯವಾಗಿದ್ದು ಸಿದ್ದರಾಮಯ್ಯ ಅವಧಿಯಲ್ಲಿಯೇ ಹಲವಾರು ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಪೂರಕವಾಗಿ ನಿಂತಿತ್ತು ಕಾಂಗ್ರೆಸ್, ಮತಾಂಧ ಟಿಪ್ಪುವಿನ ಜಯಂತಿ ಆಚರಿಸಿ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಿದ ಅವಕಾಶವಾದಿ ಸಿದ್ದರಾಮಯ್ಯಯವರಲ್ಲಿ ಪೊಲೀಸ್ ಇಲಾಖೆ, ಕಾಪು ಪೊಲೀಸರು ಪಾಠ ಕಲಿಯಬೇಕಾದದ್ದು ಏನಿಲ್ಲ. ಕಾಪು ಪೊಲೀಸರು ಕಾಪುವಿನಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಸ್ವತಃ ತಮ್ಮದೇ ಪಕ್ಷದ ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ ಕೂಡ ಈ ಧಾರ್ಮಿಕ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ನಾಟಕವೇ ? ಇಂತಹ ಪಿತೂರಿಯು ಬುದ್ಧಿವಂತರ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಕ್ಷೇತ್ರದ ಶಾಸಕನಾಗಿ ಪೊಲೀಸ್ ಇಲಾಖೆಗೆ ಗೌರವ ಮತ್ತು ಪೊಲೀಸರಲ್ಲಿ ಆತ್ಮಸ್ಥೆರ್ಯ ತುಂಬಲು ಕಟಿಬದ್ಧನಾಗಿದ್ದೇನೆ. ಸಾಮರಸ್ಯ ಶಾಂತಿಯುತ ಕಾಪು ಕ್ಷೇತ್ರದಲ್ಲಿ ಸಿದ್ಧರಾಮಯ್ಯರು ಪೊಲೀಸರ ವಿರುದ್ಧ ಧರ್ಮದ ಪಂಗಡಗಳಾಗಿ ಒಡೆದು ಜನರನ್ನು ಎತ್ತಿ ಕಟ್ಟುವ ಕೀಳು ಮನಸ್ಥಿತಿಯ ದುಸ್ಸಾಹಸಕ್ಕೆ ಛೀಮಾರಿ, ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್.ಮೆಂಡನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
18 Oct 2021, 08:24 PM
Category: Kaup
Tags: